ಮೋರಿ ವಾಸನೆಗೆ ಇಲ್ಲಿದೆ ಉಪಾಯ

ಸೋಮವಾರ, 31 ಜನವರಿ 2022 (18:22 IST)
ಬೆಂಗಳೂರಿನಲ್ಲಿ ಮೋರಿಯ ಅಕ್ಕ ಪಕ್ಕ ಇರುವ ಮನೆಗಳಿಗೆ ದುರ್ವಾಸನೆಯದ್ದೆ ಸಮಸ್ಯೆ ಇನ್ನು ಮುಂದೆ ಆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ ಹೌದು 'ರಾಡೋ' ಕಂಪನಿಯವರು ತಯಾರು ಮಾಡಿರುವ 'ಬೊಕಾಶಿ ಬಾಲ್' ದುರ್ವಾಸನೆಗೆ ರಾಮ ಬಾಣ ಎಂಬುದು ಧೃಡವಾಗಿದೆ.
ರಾಜಾಧಾನಿಯಲ್ಲಿ ಹರಿಯುವ ಏಕೈಕ ನದಿಯೆಂದರೆ ವೃಷಭಾವತಿ ನದಿ. ಆದ್ರೆ ನಗರದ ಸುತ್ತಮುತ್ತ ಅನೇಕ ಕೈಗಾರಿಕೆಗಳಿಂದಾಗಿ ವೃಷಭಾವತಿ ಸಂಪೂರ್ಣ ಮಲಿನಗೊಂಡಿದ್ದು. ಕೆಟ್ಟ ವಾಸನೆಯಿಂದ ನದಿ ಸುತ್ತಮುತ್ತಲಿನ ಏರಿಯಾ ಜನರು ವಾಸಿಸಲು ಆಗದಷ್ಟು ಮಲಿನವಾಗಿದೆ.
 
ಇದರಿಂದ ಬೇಸತ್ತಿರುವ ಎನ್ ಜಿ ಇ ಎಸ್ ಲೇಔಟ್ ನ ನಿವಾಸಿಗಳು ನದಿಯ ಮಲಿನವನ್ನು ಮುಕ್ತ ಮಾಡಲು ಹೊಸ ದಾರಿಯನ್ನು ಕಂಡು ಕೊಂಡಿದ್ದಾರೆ. ಹೌದು ಈ ಸಮಸ್ಯೆಯಿಂದ ಕಂಪ್ಲೀಟ್ ಪಾರಾಗಾಲು ''ಬೊಕಾಶಿ ಬಾಲ್'' ಎಂಬ ಪರಿಹಾರವನ್ನು ಹುಡುಕಿ ಕೊಂಡಿ ದ್ದಾರೆ. ಕೆಮಿಕಲ್ ನಿಂದ ತಯಾರು ಮಾಡಿರುವ 'ಬೊಕಾಶಿ ಬಾಲ್" ಕ್ರಿಮಿ ಕೀಟಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಇದನ್ನು 'ರಾಡೋ' ಕಂಪನಿಯವರು ಕಂಡು ಹಿಡದಿದ್ದು,
 
ಎನ್ ಜಿ ಇ ಎಸ್ ಲೇ ಔಟ್ ನ ವೃಷಭಾವತಿ ನದಿಗೆ ಹಾಕಿ ಪ್ರಯೋಗ ಮಾಡಲಾಯಿತು. 'ಬೊಕಾಶಿ ಬಾಲ್'ಲಕ್ಷಣವೆಂದರೆ ಕ್ರಿಮಿ ಕೀಟಗ ಳನ್ನು ಆಹಾರವಾಗಿ ಸೇವಿಸುತ್ತದೆ. ಸೊಳ್ಳೆಗಳನ್ನು ಕೂಡ ಲಾರ್ವಾ ಹಂತದಲ್ಲಿ ಸೇವಿಸಿ ಇದರಿಂದ ಕೆಟ್ಟ ವಾಸನೆ ದೂರವಾ ಗುತ್ತದೆ. ಅದಲ್ಲದೆ ಬಾಲ್ ಗಳು ಕರಗುವವರೆಗೂ ಕೆಲಸವನ್ನು ಮಾಡುತ್ತಲೇ ಇದ್ದು, ಪ್ರತಿ ದಿನಗ ಳಿಗೊಮ್ಮೆ ಈ ರೀತಿ ಮಾಡುವಲ್ಲಿ ಪರಿಹಾರ ಕಂಡು ಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ