ರಸ್ತೆ ಗುಂಡಿಗೆ ಮತ್ತೊಂದು ಬಲಿ

ಸೋಮವಾರ, 31 ಜನವರಿ 2022 (14:06 IST)
ಸರಣಿ ಅಪಘಾತ ಘಟನೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು ಅಸಮಪರ್ಕ ರಸ್ತೆ ಕಾಮಗಾರಿಗಳು ಅಂತೆಯೇ ರಸ್ತೆಗಳ ಕಳಪೆ ಗುಣಮಟ್ಟದಿಂದಾಗಿ ಹಲವಾರು ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತ್ತೀಚೆಗೆ ತಾನೇ ಕರ್ನಾಟಕ ಹೈಕೋರ್ಟ್‌ಗೆ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆ ಗುಂಡಿಗಳ ದುರಸ್ತಿ ನಡೆಸಲಾಗಿದೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಸ್ವತಃ ನ್ಯಾಯಾಧೀಶರೇ ಈ ಪ್ರಕರಣವನ್ನು ನಂಬಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
 
ಇದರಲ್ಲಿ ಪಾಲಿಕೆಯ ತಪ್ಪು ಇಲ್ಲವೆಂದು ನ್ಯಾಯಾಧೀಶರು ವೈಯಕ್ತಿಕವಾಗಿ ಭಾವಿಸಿದರೂ, ನ್ಯಾಯಾಲಯದ್ದೇ ತಪ್ಪು ಎಂದು ಹೇಳುವ ಹೇಳಿಕೆಯನ್ನು ನೀಡಬೇಡಿ ಎಂಬುದಾಗಿ ಲೈವ್‌ಲಾ ವರದಿ ಮಾಡಿದೆ. ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ವಿಜಯ್ ಮೆನನ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ಮುಖ್ಯ ವಿಭಾಗೀಯ ಪೀಠ ನಡೆಸಿದೆ.
 
ಭಾರತದ ಅತಿದೊಡ್ಡ ಹಾಗೂ ಶ್ರೀಮಂತ ನಾಗರಿಕ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ಬಿಬಿಎಂಪಿ, ರಸ್ತೆ ಸಂಬಂಧಿತ ಕಾಮಗಾರಿಗಳಿಗಾಗಿ ವರ್ಷ ವರ್ಷ ಪಾವತಿದಾರರ ಹಣದಲ್ಲಿ ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡುತ್ತದೆ.
 
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ನಗರದಲ್ಲಿ ರಸ್ತೆ ಸಂಬಂಧಿತ ಕಾಮಗಾರಿಗಾಗಿ ಕಳೆದ ಐದು ವರ್ಷಗಳಲ್ಲಿ ಸುಮಾರು 20,000 ಕೋಟಿಗೂ ಹೆಚ್ಚಿನ ಹಣ ಖರ್ಚುಮಾಡಲಾಗಿದೆ ಎಂದು ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ