ಕೋವಿಡ್ – 19 ನಿಯಂತ್ರಣಕ್ಕೆ ಕಂಟೈನ್ ಮೆಂಟ್ ಝೋನ್ ಗಳನ್ನು ಸರಕಾರ ಮಾಡಿದೆ. ಆದರೆ ಆ ಪ್ರದೇಶಗಳಲ್ಲೇ ಹೆಚ್ಚಿನ ಜನರ ಓಡಾಟ ಮುಂದುವರಿದಿದೆ.
ಕಲಬುರಗಿ ನಗರದಲ್ಲಿ ಕೆಲವು ಕಂಟೈನ್ ಮೆಂಟ್ ಝೋನ್ ಗಳಲ್ಲಿ ಕೊರೊನಾ ವೈರಸ್ ನ ಭಯವೇ ಇಲ್ಲದಂತೆ ಜನರು ಓಡಾಡುತ್ತಿದ್ದಾರೆ.
ಅದರಲ್ಲೂ ಕಂಟೈನ್ ಮೆಂಟ್ ಝೋನ್ ಗಳಾಗಿರುವ ಇಸ್ಲಾಮಾಬಾದ್ ಕಾಲೋನಿ, ಮೋಮಿನಪುರ, ಖಮರ್ ಕಾಲೋನಿ, ಉಮರ್ ಕಾಲೋನಿ ಹಾಗೂ ಸಂತ್ರಾಸ್ ವಾಡಿ, ಮಿಜಗುರಿ ಏರಿಯಾಗಳಲ್ಲಿ ಜನರ ಓಡಾಟ ಮುಂದುವರಿದಿದೆ.
ಅಂಗಡಿಗಳೂ ಸಹ ಕಂಟೈನ್ ಮೆಂಟ್ ಝೋನ್ ಗಳಲ್ಲಿ ತೆರೆದಿದ್ದು, ಕೊರೊನಾ ಆತಂಕ ಹೆಚ್ಚಿಸಿದೆ. ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಕಾಬಿಟ್ಟಿಯಾಗಿ ಇಲ್ಲಿ ತಿರುಗಾಡುತ್ತಿದ್ದಾರೆ.