‘ವಾಟ್ ನಾನ್ ಸೆನ್ಸ್ ಯೂ ಆರ್ ಟಾಕಿಂಗ್ ರಾಮಲಿಂಗಾರೆಡ್ಡಿ?’

ಶನಿವಾರ, 17 ಫೆಬ್ರವರಿ 2018 (10:49 IST)
ಕುಲಬರಗಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಬಿಜೆಪಿ ನಾಯಕ, ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸತ್ತವರೆಲ್ಲಾ ಬಿಜೆಪಿಯವರಲ್ಲ ಎಂಬ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಜೋಶಿ ಗರಂ ಆಗಿದ್ದಾರೆ.
 

ಇತ್ತೀಚೆಗೆ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಕದಿರೇಶನ್ ಹತ್ಯೆಯಾದಾಗ ಗೃಹ ಸಚಿವರು ಸತ್ತವರನ್ನೆಲ್ಲಾ ಬಿಜೆಪಿ ತಮ್ಮವರು ಎನ್ನುತ್ತದೆ. ಸತ್ತವರೆಲ್ಲಾ ಬಿಜೆಪಿಯವರಲ್ಲ ಎಂದಿದ್ದರು.

ಈ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರಹ್ಲಾದ್ ಜೋಶಿ, ಕುಲಬರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ‘ವಾಟ್ ನಾನ್ ಸೆನ್ಸ್ ಯೂ ಆರ್ ಟಾಕಿಂಗ್ ರಾಮಲಿಂಗಾರೆಡ್ಡಿ? ನೀವು ರಾಜ್ಯದ ಗೃಹಸಚಿವರು ಎಂಬುದು ನೆನಪಿರಲಿ. ಗಲ್ಲಿ ನಾಯಕರಂತೆ ಮಾತನಾಡಬೇಡಿ. ನಿಮ್ಮ ನಾಯಕ ರಾಹುಲ್ ಗಾಂಧಿ ಕೊಡುವ ಸರ್ಟಿಫಿಕೆಟ್ ನಮಗೆ ಬೇಡ. ರಾಹುಲ್ ಒಬ್ಬ ಪಾರ್ಟ್ ಟೈಮ್ ರಾಜಕಾರಣಿ’ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ