ಹಿಂದೂ ಧರ್ಮ, ರಾಷ್ಟ್ರೀಯತೆ ಬಗ್ಗೆ ಪೇಜಾವರ ಶ್ರೀಗಳಿಗಿರುವ ಬದ್ಧತೆಯನ್ನು ಪ್ರಶ್ನಿಸುವ ಕನಿಷ್ಠ ಅರ್ಹತೆ ನಮಗ್ಯಾರಿಗೂ ಇಲ್ಲ – ಪ್ರತಾಪ್ ಸಿಂಹ

ಮಂಗಳವಾರ, 27 ಜೂನ್ 2017 (16:57 IST)
ಉಡುಪಿ ಕೃಷ್ಣಮಠದಲ್ಲಿ ಇಫ್ತಾರ್ ಕೂಟದ ಬಳಿಕ ನಮಾಜ್`ಗೆ ಅವಕಾಶ ಕೊಟ್ಟ ಬಗ್ಗೆ ಶ್ರೀರಾಮಸೇನೆಯಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಬಹುತೇಕ ಮಂದಿ ಶ್ರೀಗಳ ಕಾರ್ಯವನ್ನ ಶ್ಲಾಘಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಸಹ ಪೇಜಾವರ ಶ್ರೀಗಳ ಕಾರ್ಯವನ್ನ ಹೊಗಳಿದ್ದಾರೆ.

ಪೇಜಾವರ ಶ್ರೀಗಳು ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸುವ ಸಲುವಾಗಿ ಒಂದು ಸಾಹಸವೆನ್ನಬಹುದಾದ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದ ಹಿಂದಿರುವ ಸದುದ್ದೇಶವನ್ನು ಅರ್ಥಮಾಡಿಕೊಂಡು ಹುಳುಕು ಹುಡುಕುವುದನ್ನು ಬಿಟ್ಟರೆ ಒಳಿತು. ಹಿಂದೂ ಧರ್ಮ, ರಾಷ್ಟ್ರೀಯತೆ ಬಗ್ಗೆ ಪೇಜಾವರ ಶ್ರೀಗಳಿಗಿರುವ ಬದ್ಧತೆಯನ್ನು ಪ್ರಶ್ನಿಸುವ ಕನಿಷ್ಠ ಅರ್ಹತೆ ನಮಗ್ಯಾರಿಗೂ ಇಲ್ಲ.  ಎಂದು ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್`ನಲ್ಲಿ ಹೇಳಿದ್ದಾರೆ.

ಕೇಂದ್ರ ಸಚಿವ ಸದಾನಂದಗೌಡ ಸಹ ಪೇಜಾವರ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಪೇಜಾವರ ಶ್ರೀ ಭಾವನಾತ್ಮಕ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದೂ ಧರ್ಮದ ಮುಖ್ಯಸ್ಥರಾಗಿ ಸರ್ವಧರ್ಮಗಳಿಗೂ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ವೆಬ್ದುನಿಯಾವನ್ನು ಓದಿ