ಈ ವಿಚಾರಕ್ಕೆ ಸರ್ಕಾರಕ್ಕೆ ಪತ್ರ ಬರೆದ ಸಂಸದ ಜಿ.ಎಂ.ಸಿದ್ದೇಶ್ವರ್
ಭಾನುವಾರ, 25 ಏಪ್ರಿಲ್ 2021 (11:31 IST)
ಬೆಂಗಳೂರು : ಕೊರೊನಾ ಲಸಿಕೆ ಪೂರೈಸುವಂತೆ ಕೋರಿ ಸರ್ಕಾರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಪತ್ರದಲ್ಲಿ ದಾವಣಗೆರೆಗೆ 1 ಲಕ್ಷ ಡೋಸ್ ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳವವರ ಸಂಖ್ಯೆ ಹೆಚ್ಚಾಗಿದೆ. ಲಸಿಕೆ ಇಲ್ಲದೆ ಜನರು ವಾಪಾಸ್ ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ನಿನ್ನೆ ಕೇವಲ 7 ಸಾವಿರ ಡೋಸ್ ಲಸಿಕೆ ಬಂದಿದೆ. ಇನ್ನು 1 ಲಕ್ಷ ಡೋಸ್ ಹೆಚ್ಚುವರಿ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಸಂಸದ ಮನವಿ ಮಾಡಿದ್ದಾರೆ.