ಕೊರೋನಾ ಔಷಧಗಳ ಮೇಲಿನ ತೆರಿಗೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಭಾನುವಾರ, 25 ಏಪ್ರಿಲ್ 2021 (09:18 IST)
ನವದೆಹಲಿ: ಜನ ಕೊರೋನಾ ಔಷಧಿಗಳು ದುಬಾರಿ ಎಂದು ಅಳಲು ತೋಡಿಕೊಳ್ಳುತ್ತಿರುವ ಬೆನ್ನಲ್ಲೇ ಕೊನೆಗೂ ಕೇಂದ್ರ ಸರ್ಕಾರ ಆಮ್ಲಜನಕ ಮತ್ತು ಅವುಗಳ ಉಪಕರಣಗಳ ಮೇಲಿನ ಆಮದು ಸುಂಕ ಮತ್ತು ಸೆಸ್ ಇಳಿಕೆ ಮಾಡಿದೆ.


ಆಕ್ಸಿಜನ್ ಗಾಗಿ ದೇಶದಲ್ಲಿ ಹಾಹಾಕಾರವೆದ್ದಿರುವ ಬೆನ್ನಲ್ಲೇ ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧೀ ಉಪಕರಣಗಳ ಮೇಲಿನ ತೆರಿಗನ್ನು ಇಳಿಕೆ ಮಾಡಲಾಗಿದೆ.

ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದಂತೇ ಔಷಧಿಗಳ ಮೇಲಿನ ಸುಂಕ ಕಡಿಮೆ ಮಾಡಿ ಎಂದು ಕೇಂದ್ರಕ್ಕೆ ವಿಪಕ್ಷಗಳೂ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಕೇಂದ್ರ ಇಂತಹದ್ದೊಂದು ನಿರ್ಧಾರಕ್ಕೆ ಬಂದಿರುವುದು ಕೊರೋನಾ ರೋಗಿಗಳ ಮೇಲಿನ ಹೊರೆ ಕೊಂಚ ಮಟ್ಟಿಗೆ ಕಡಿಮೆ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ