ಎಂಪಿ ಟಿಕೆಟ್ ಶಾಮನೂರುಗೆ ಬೇಡ್ವೇ ಬೇಡಂತೆ

ಶುಕ್ರವಾರ, 29 ಮಾರ್ಚ್ 2019 (13:47 IST)
ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ಶಾಮನೂರು ಶಿವಶಂಕರಪ್ಪ ಹಿಂದೇಟು ಹಾಕಿರುವುದು ಕೈ ಪಾಳೆಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶಾಮನೂರುಗೆ ಪರ್ಯಾಯವಾಗಿ ಅಭ್ಯರ್ಥಿ ಹುಡುಕಾಟವನ್ನು ಕಾಂಗ್ರೆಸ್ ಶುರುವಿಟ್ಟುಕೊಂಡಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಕೈ ನಾಯಕರಿಂದ ಹುಡುಕಾಟ ನಡೆದಿದೆ. ಈಗಾಗಲೇ ಇಬ್ಬರಿಗೆ ಬುಲಾವ್ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಂಜಪ್ಪ ಹಾಗೂ ತೇಜಸ್ವಿ ಪಟೇಲ್ ಗೆ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
ಹೆಚ್.ಬಿ ಮಂಜಪ್ಪ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ತೇಜಸ್ವಿ ಪಟೇಲ್, ಜೆ.ಹೆಚ್ ಪಟೇಲ್ ತಮ್ಮನ ಪುತ್ರರಾಗಿದ್ದಾರೆ. ಇಬ್ಬರ ಜೊತೆಯೂ ಚರ್ಚೆ ನಡೆಸಿದ್ದಾರೆ  ದಿನೇಶ್ ಗುಂಡೂರಾವ್.

ಕಳೆದ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ‌ಕ್ಕೆ ವಯಸ್ಸಿನ ಕಾರಣ ನೀಡಿ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ ಸಿದ್ದರಾಮಯ್ಯ. ಇದೀಗ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ವಯಸ್ಸಿನ ಅಡ್ಡಿ ಬರುವುದಿಲ್ಲವೇ ಎಂದು ಅಸಮಾಧಾನಗೊಂಡಿರುವ ಶ್ಯಾಮನೂರು ನಡೆ ಚರ್ಚೆಗೆ ಕಾರಣವಾಗಿದೆ.

ಹಾಗಾಗಿಯೇ ಹೈಕಮಾಂಡ್ ಟಿಕೆಟ್ ಘೋಷಿಸಿದರೂ ನಯವಾಗಿಯೇ ತಿರಸ್ಕರಿಸಿದ್ದಾರೆ ಶ್ಯಾಮನೂರು. ತಮ್ಮ ಪುತ್ರ ಮಲ್ಲಿಕಾರ್ಜುನ್ ಗೆ‌‌ ಕೂಡ ಆಸಕ್ತಿ ಇಲ್ಲಾ ಎಂದು ಶಾಮನೂರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ