ಪ್ರಧಾನಿ ವಿರುದ್ಧ ಸಂಸದ ವೀರಪ್ಪ ಮೊಯಿಲಿ ಕಿಡಿ

ಶನಿವಾರ, 7 ಜುಲೈ 2018 (19:07 IST)
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆಯೇ ಮುಂದಿನ ಲೋಸಕಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂಬ ಆಗ್ರಿಮೆಂಟ್ ಆಗಿತ್ತು ಅಂತ ಚಿಕ್ಕಬಳ್ಳಾಪುರದಲ್ಲಿ ಮಾಜಿ ಕೇಂದ್ರ ಸಚಿವ ಸಂಸದ ವೀರಪ್ಪ ಮೊಯಿಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮೊಯಿಲಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮೊದಲೇ ಮಾತುಕತೆ ಆಗಿದೆ. ಆದ್ರೆ ಇದುವರೆಗೂ ಯಾವ ಕ್ಷೇತ್ರಗಳ, ಎಷ್ಟು ಕ್ಷೇತ್ರಗಳು ಯಾರ‍್ಯಾರಿಗೆ ಎಂಬ ಚರ್ಚೆಯಾಗಿಲ್ಲ, ಅಂದುಕೊಂಡಂತೆ ಮೂರನೇ 1 ಭಾಗ ಜೆಡಿಎಸ್ ಹಾಗೂ ಉಳಿದ ಎರಡು ಭಾಗ ಕಾಂಗ್ರೆಸ್‌ಗೆ ಸಿಗಲಿದೆ  ಅಂತ ವೀರಪ್ಪ ಮೊಯಲಿ ತಿಳಿಸಿದರು.

 ಇನ್ನೂ ಕೆಲವು ಕ್ಷೇತ್ರಗಳಿಗೆ ಜೆಡಿಎಸ್ ಪಟ್ಟು ಹಿಡಿದಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ, ಮೊಯಿಲಿ, ಇದೆಲ್ಲಾ ಊಹಾಪೋಹ ಅಷ್ಟೇ ಅಂತ ಅಂದರು. ಇನ್ನೂ ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಮೊಯಿಲಿ, ಕೇಂದ್ರ ಸರ್ಕಾರ, ನಿಷ್ಕ್ರೀಯ ಸರ್ಕಾರ, ಬರೀ ಅಶ್ವಾಸನೆಗಳ ಸರ್ಕಾರ. ಕಪ್ಪು ಹಣ ವಾಪಾಸ್ ತರ್ತಿನಿ ಅಂತ ಕಪ್ಪು ಹಣ ಜಾಸ್ತಿ ಮಾಡಿದ್ದಾರೆ. ನೋಟು ಅಮಾನ್ಯೀಕರಣ ಮಾಡಿ ಕಪ್ಪು ಹಣ ನಿಯಂತ್ರಣ ಮಾಡ್ತೀವಿ ಅಂತ ಕಪ್ಪು ಹಣವನ್ನ ಬಿಳಿ ಹಣ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಆಧೋಗತಿಗೆ ತಲಿಪಿದ್ದು, ರೂಪಾಯಿ ಮೌಲ್ಯ ಕನಿಷ್ಟ ಮಟ್ಟಕ್ಕೆ ಕುಸಿದಿದೆ.

2019 ರಲ್ಲಿ ಮೋದಿಯನ್ನ ಬದಲಾವಣೆ ಮಾಡಬೇಕೆಂಬ ಕೂಗು ದೇಶದ ಎಲ್ಲಡೆ ಇದೆ. ಹೀಗಾಗಿ ಈಗಾಗಲೇ ಮಹಾಘಟ್ ಬಂಧನ್ ಟ್ರೈಲರ್ ನೋಡಿ ಮೋದಿ ತತ್ತರಿಸಿದ್ದು., ರಾಜಸ್ಥಾನ, ಮೀಜೋರಾಂ, ಚತ್ತೀಸ್ ಘಢ್ ಹಾಗೂ ,ಮಧ್ಯಪ್ರದೇಶಗಳ ಚುನಾವಣೆಯನ್ನ ಲೋಕಸಭಾ ಚುನಾವಣೆ ಜೊತೆಯೇ ಮಾಡಲು ಚಿಂತನೆ ನಡೆಸಿದ್ದಾರೆ. ಅಪ್ಪಿ ತಪ್ಪಿ ಮೊದಲೇ ಮಾಡಿದ್ರೇ ಸೋಲ್ತೀವಿ ಅನ್ನೋ ಭೀತಿಯಿಂದ ಮೋದಿ ಈ ತಂತ್ರದ ಬಗ್ಗೆ ಚಿಂತನೆ ನಡೆಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ