ಡಿಕೆಶಿ ಚುನಾವಣೆ ಅಖಾಡಕ್ಕೆ ಬರಲಿ ಎಂದ ಎಂಟಿಬಿ

ಸೋಮವಾರ, 28 ಅಕ್ಟೋಬರ್ 2019 (19:53 IST)
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಉಪಚುನಾವಣೆ ಕಣಕ್ಕೆ ಪಂಥಾಹ್ವಾನ ನೀಡಿದ್ದಾರೆ.

ಮೈತ್ರಿ ಸರಕಾರ ಪತನವಾಗುತ್ತಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ನಮ್ಮ-ನಿಮ್ಮ ಭೇಟಿ ಚುನಾವಣೆ ರಣರಂಗದಲ್ಲಿ ಅಂತ ಹೇಳಿಕೆ ನೀಡಿದ್ದರು. ಈಗ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್  ಅವರನ್ನು ಹೊಸಕೋಟೆಯ ಚುನಾವಣೆ ರಣರಂಗಕ್ಕೆ ಸ್ವಾಗತಿಸುತ್ತೇನೆ.

ಹೀಗಂತ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಇನ್ನು, ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಎಂಟಿಬಿ, ಉಪ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ