ಮುಡಾ ಹಗರಣ: ಸಿಎಂನವರೇ ಕನ್ನಡರಿಗರ ಕೆಲ ಪ್ರಶ್ನೆಗಳಿಗೆ ಉತ್ತರ ಕೊಡಿ: ಆರ್‌ ಅಶೋಕ್

Sampriya

ಮಂಗಳವಾರ, 6 ಆಗಸ್ಟ್ 2024 (14:51 IST)
ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕನ್ನಡಿಗರು ಕೆಲ ಪ್ರಶ್ನೆಗಳಿಗೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಸಿಎಂ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಅವರು ಕೇಳಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್‌ ಅಶೋಕ್ ಅವರು ಸಿಎಂಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, 1.) 2013ರ ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಯ ಆಸ್ತಿ ಉಲ್ಲೇಖ ಮಾಡದೆ ತಪ್ಪು ಮಾಹಿತಿ ನೀಡುತ್ತೀರಿ. ನಂತರ 2018ರಲ್ಲಿ ಅದರ ಮಾರುಕಟ್ಟೆ ಮೌಲ್ಯ ₹25 ಲಕ್ಷ ಎಂದು ನಮೂದಿಸಿದ್ದೀರಿ. 5 ವರ್ಷಗಳಾದ ಮೇಲೆ ದಿಢೀರನೆ ಆಸ್ತಿ ಹೊಂದಿರುವ ಬಗ್ಗೆ ಜ್ಞಾನೋದಯವಾಯಿತು?

2.) ಈಗ ಹಗರಣ ಬೆಳಕಿಗೆ ಬಂದಮೇಲೆ ₹63 ಕೋಟಿ ಕೊಡಿ ಸೈಟು ಬಿಟ್ಟುಕೊಡುತ್ತೇನೆ ಎಂದು ಹೇಳುತ್ತೀರಿ. 2018ರಲ್ಲಿ ₹25 ಲಕ್ಷ ಇದ್ದ ಆಸ್ತಿ ಮೌಲ್ಯ, 2024ರಲ್ಲಿ ₹63 ಕೋಟಿ ಆಗಲು ಹೇಗೆ ಸಾಧ್ಯ? ಇದೇನಾದರೂ ರಾಹುಲ್‌ಗಾಂಧಿ  ಅವರ ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಯೋಜನೆಯ ಭಾಗವಾ?

3.) 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಕೊಡುವುದು ಬೇಡ ಎಂದು ನಗರಾಭಿವೃದ್ಧಿ ಇಲಾಖೆ ಆದೇಶವಿದ್ದರೂ ಅದನ್ನ ಉಲ್ಲಂಘಿಸಿ ಮೂಡಾ ಅಧ್ಯಕ್ಷ ಮರಿಗೌಡ ಅವರು ಹಗರಣದ ಬಾಗಿಲನ್ನು ತೆಗೆದಿದ್ದು ಏಕೆ? ಇದರ ಹಿಂದೆ ಯಾವ ಪ್ರಭಾವಿ ಶಕ್ತಿ ಕೆಲಸ ಮಾಡುತ್ತಿತ್ತು?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ