ಮುಡಾ ಹಗರಣ: ಹೆಲಿಕಾಫ್ಟರ್‌ನಲ್ಲೇ ಬಂದು ದಾಖಲೆ ಹೊತ್ತೊಯ್ದ ಕಾಂಗ್ರೆಸ್ ಸಚಿವ

Sampriya

ಬುಧವಾರ, 21 ಆಗಸ್ಟ್ 2024 (19:29 IST)
Photo Courtesy X
ಹುಬ್ಬಳ್ಳಿ: ಮುಡಾ ಹಗರಣ ಹೊರಗಡೆ ಬರುತ್ತಿದ್ದ ಹಾಗೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೆಲಿಕಾಫ್ಟರ್‌ನಲ್ಲಿ ಬಂದು ಹಗರಣದ ದಾಖಲೆಗಳನ್ನು ಕಸದಂತೆ ತುಂಬಿಕೊಂಡು ಹೋಗಿದ್ದಾರೆಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿರುವುದು ಈಗಾಗಲೇ ಬಯಲಾಗಿದೆ. ಆದರೆ ಸಿದ್ದರಾಮಯ್ಯ ಅವರು ನಾವು  ಇಂತಹ ಜಾಗದಲ್ಲೇ ನಿವೇಶನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ ಎಂದು ಸುಳ್ಳು ಸಮರ್ಥನೆ ಕೊಟ್ಟಿದ್ದು, ನೀವು ಈಗ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು.

ಇದೀಗ ನಿಮ್ಮ ಧರ್ಮಪತ್ನಿ ಪಾರ್ವತಿ ಅವರೇ ಮುಡಾ ಪ್ರಾಧಿಕಾರಕ್ಕೆ ಬರೆದಿರುವ ಪ್ರತವೇ ಇದಕ್ಕೆಲ್ಲ ಸಾಕ್ಷಿಯಿದೆ. ಇದೀಗ ಯಾವ ಸ್ಥಳ ಎಂದು ಬರೆದಿರುವಲ್ಲಿ ವೈಟ್ನರ್ ಹಚ್ಚಿ ಹೋಗಿರುವವರು ಯಾರು. ಇದು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ನೀವು ನಿವೇಶನ ಕಬಳಿಸಲು ಹಾಗೂ ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಹೇಳಿದರು.

ಸಮಾಜದ ಮುಂದೆ ನನ್ನದೇನು ತಪ್ಪಿಲ್ಲ, ಸತ್ಯಹರಿಶ್ಚಂದ್ರನಂತೆ ತೋರಿಸಿಕೊಳ್ಳುವು ನೀವು ಈ ಪತ್ರದ ಬಗ್ಗೆ ಉತ್ತರಿಸಲೇಬೇಕು. ಈ ಹಗರಣದಲ್ಲಿ ಕೈವಾಡವಿರುವ ಕಾರಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಘಟನೆಯನ್ನು ಕಾಪಾಡಿಕೊಳ್ಳಿ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ