ಮುಡಾ ಹಗರಣ: ಮತ್ತೇ ಠಾಣೆ ಮೆಟ್ಟಿಲೇರಿದ ಸ್ನೇಹಮಯಿ ಕೃಷ್ಣ, ಯಾರಾ ವಿರುದ್ಧ ಗೊತ್ತಾ

Sampriya

ಮಂಗಳವಾರ, 28 ಜನವರಿ 2025 (18:19 IST)
ಮೈಸೂರು: ಮುಡಾದ 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಬ್ಬರು ಜೆಡಿಎಸ್‌ ಶಾಸಕರ ವಿರುದ್ಧ ದೂರು ನೀಡಿದ್ದಾರೆ.

ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿದ ಅವರು ಜೆಡಿಎಸ್‌ ಶಾಸಕರಾದ ಜಿ.ಟಿ ದೇವೇಗೌಡ  ಹಾಗೂ ಪುತ್ರ ಜಿ.ಡಿ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ: ಮುಡಾ ಸೈಟು ಹಂಚಿಕೆಯಲ್ಲಿ ಶಾಸಕ ಜಿ.ಟಿ ದೇವೇಗೌಡರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.

ಸರ್ವೇ ನಂ.81/2ರಲ್ಲಿ 2.22 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲವೆಂದು 19 ನಿವೇಶನವನ್ನು ಜಿಟಿಡಿ ಕುಟುಂಬ ಪಡೆದುಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಭೂ ಮಾಲೀಕನ ಮನೆಗೆ ತೆರಳಿ ಮಾತುಕತೆ ನಡೆಸಿರುವ ಫೋಟೋ ಸಹ ಬಿಡುಗಡೆ ಮಾಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ