ಮುದ್ದಹನುಮೇಗೌಡ ನಾಮಪತ್ರ ವಾಪಸ್?: ದೇವೇಗೌಡ್ರಿಗೆ ಗೆಲುವು ಸುಲಭದ ತುತ್ತಾ?

ಬುಧವಾರ, 27 ಮಾರ್ಚ್ 2019 (20:56 IST)
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ರೆಬಲ್ ಆಗಿ ದೇವೇಗೌಡ್ರ ವಿರುದ್ಧ ಸ್ಪರ್ಧಿಸಿರೋ ಮುದ್ದಹನುಮೇಗೌಡ ಚುನಾವಣಾ ಕಣದಿಂದ ಹಿಂದಕ್ಕೆ ಸರಿಸುವಲ್ಲಿ ಕೈ ನಾಯಕರು ಯಶಸ್ವಿಯಾಗಿದ್ದಾರಾ? ಹೀಗೊಂದ ಪ್ರಶ್ನೆ ಚಾಲ್ತಿಗೆ ಬಂದಿದೆ.

ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿದ್ದು,  ಲೋಕಸಭಾ ಕ್ಷೇತ್ರ ಗೆಲ್ಲಲು
ಟೂರ್ ಪ್ರೋಗ್ರಾಂ ಸಭೆ ಮಾಡುತ್ತಿದ್ದೇವೆ. ಎರಡೂ ಪಕ್ಷದ ಮುಖಂಡರು ಭಾಗವಹಿಸುತ್ತಿದ್ದಾರೆ. ನಮ್ಮ ನಮ್ಮಲ್ಲಿ ಆಗುವ ಚರ್ಚೆಗಾಗಿ ಸಭೆ, ರಣ ನೀತಿಗಾಗಿ ಸಭೆ ಮಾಡುವಂತದ್ದು. ದೇವೇಗೌಡರು ಎಷ್ಟು ದಿನ ನಮ್ಮ ಕ್ಷೇತ್ರಕ್ಕೆ ಕೊಡುತ್ತಾರೆ ಕಾದುನೋಡಬೇಕಿದೆ  ಎಂದಿದ್ದಾರೆ.

ಇನ್ನು ಕೈ ಪಾಳೆಯದ ರೆಬೆಲ್ ಅಭ್ಯರ್ಥಿ ಮುದ್ದಹನುಮೇಗೌಡ ವಿಚಾರವಾಗಿ ಮಾತನಾಡಿರುವ ಅವರು, ಮುದ್ದಹನುಮೇಗೌಡರ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ. ಮುದ್ದಹನುಮೇಗೌಡ ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರು ಕಣದಿಂದ ನಾಮಪತ್ರ ವಾಪಸ್ ಪಡೆಯೋ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿ ಸೋಲಿಸಲು ಎಷ್ಟು ಮಾಡಬೇಕೋ ಅಷ್ಟು ಮಾಡ್ತೇವೆ. ದೊಡ್ಡ ದೊಡ್ಡ ಯೋಜನೆ ಕಳೆದ 5 ವರ್ಷದಿಂದ ಕೇಂದ್ರದಲ್ಲಿ ಕಂಡಿಲ್ಲ. ದೇಶದಲ್ಲಿ ಶಾಂತಿ ನೆಲಸಲು ಬಯಸುತ್ತೇವೆ. ಜಾತ್ಯಾತೀತವಾದ ಮನಸ್ಥಿತಿ ಕಾಪಾಡಬೇಕಿದೆ.
ಬಿಜೆಪಿ ಯಾವತ್ತು ಅಧಿಕಾರಕ್ಕೆ ಬರಬಾರದು ಮೋದಿ ಪ್ರಧಾನಿಯಾಗಬಾರದು ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ