ರಾಜ್ಯದೆಲ್ಲೆಡೆ ಚುನಾವಣೆ ಕಾವು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ರೆ, ವಾಣಿಜ್ಯ ನಗರಿಯಲ್ಲಿನ ಜನರು ಕೂಲ್ ಆಗಿ ರಂಗಪಂಚಮಿ ಬಣ್ಣದೋಕುಳಿಯಲ್ಲಿ ಮುಳುಗಿ ಸಂಭ್ರಮಪಟ್ಟರು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ರಂಗಪಂಚಮಿ ಬಣ್ಣದೋಕುಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಓಕುಳಿ ಆಟವಾಡಿ ಜನರು ಸಂಭ್ರಮಿಸಿದರು. ನಗರದ ಹಲವು ಕಡೆ ಸಾಮೂಹಿಕ ಬಣ್ಣ ಆಚರಣೆ ಜೊತೆ ಡಿಜೆ ಹಾಡಿಗೆ ಸ್ಟೆಪ್ ಹಾಕಿ ಯುವಕರು ಜಖತ್ ಎಂಜಾಯ್ ಮಾಡಿದರು. ನಗರದಾದ್ಯಂತ ಹೋಳಿ ಸಂಭ್ರಮ ಕಳೆಗಟ್ಟಿತ್ತು. ಚಿಕ್ಕ ಚಿಕ್ಕ ಮಕ್ಕಳು ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಇನ್ನು ಹೋಳಿ ಹಬ್ಬದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೋಳಿ ಹಿನ್ನೆಲೆಯಲ್ಲಿ ನಗರದಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅವಳಿ ನಗರದ ಮಧ್ಯೆ ಸಂಚರಿಸುವ ಬಿಎಸ್ ಆರ್ ಟಿಸಿ ಬಸ್ ಸಂಚಾರ ರದ್ದುಗೊಳಿಸಲಾಗಿತ್ತು.
ಒತ್ತಾಯ ಪೂರ್ವಕ ಬಣ್ಣ ಹಚ್ಚುವವರು ಹಾಗೂ ಬಲವಂತವಾಗಿ ವಾಹನ ನಿಲ್ಲಿಸಿ ವಂತಿಗೆ ಸಂಗ್ರಹಿಸುವವರ ವಿರುದ್ದ ಕಠಿಣ ಕ್ರಮ ತಗೆದುಕೊಳ್ಳುವದಾಗಿ ಪೊಲೀಸ್ ಇಲಾಖೆ ಎಚ್ವರಿಕೆ ನೀಡಿತ್ತು. ಹೀಗಾಗಿ ಶಾಂತಿಯುತವಾಗಿ ಬಣ್ಣದೋಕುಳಿ ನಡೆಯಿತು.