ಮೊದಲ ಬಾರಿಗೆ ನಗರ ಪೊಲೀಸ್ ಇಲಾಖೆಯಿಂದ ಶಸ್ತ್ರಾಸ್ತ್ರ ಪರವಾನಗಿ ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆ

ಗುರುವಾರ, 30 ಸೆಪ್ಟಂಬರ್ 2021 (21:56 IST)
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಬೆಂಗಳೂರು ಐಟಿ ಹಬ್ ಆಗಿದೆ. ಬೆಳೆಯುತ್ತಿರುವ ನಗರದ ನಾಗರಿಕರಿಗೆ ನೂತನ ಆನ್​​ಲೈನ್ ವ್ಯವಸ್ಥೆ ಸಹಕಾರಿಯಾಗಲಿದೆ. 8,138 ಗನ್ ಲೈಸೆನ್ಸ್ ನೀಡಿದ್ದೇವೆ. ಶಸ್ತ್ರಾಸ್ತ್ರ ಪರವಾನಗಿ ನೀಡಲು ಅಥವಾ ನವೀಕರಿಸಲು ಸಾರ್ವಜನಿಕರು ಆಯುಕ್ತರ ಕಚೇರಿಗೆ ಬರಬೇಕಿತ್ತು. ಅಲ್ಲದೇ ಕೊರೊನಾ ಬಿಕ್ಕಟ್ಟಿನಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಂತ್ರಜ್ಞಾನ ಮೂಲಕ ಸಂಪರ್ಕ ರಹಿತ ಸೇವೆ ನೀಡುವ‌ ನಿಟ್ಟಿನಲ್ಲಿ ಹೊಸ ಸೇವೆ ಪರಿಚಯಿಸಲಾಗಿದೆ‌ ಎಂದರು.
ಏನೆಲ್ಲಾ ಸೇವೆಗಳು ಲಭ್ಯ? : ಬಿಡುಗಡೆಯಾಗಿರುವ ಹೊಸ ಆನ್​ಲೈನ್ ಅಪ್ಲಿಕೇಷನ್​ನಲ್ಲಿ ಹಲವು ರೀತಿಯ ಸೇವೆಗಳನ್ನು ನಾಗರಿಕರು ಪಡೆಯಬಹುದಾಗಿದೆ‌. ಹೊಸ ಶಸ್ತ್ರ ಪರವಾನಗಿ, ನವೀಕರಣ, ಮರುನೋಂದಣಿ, ಹೆಚ್ಚುವರಿ ಶಸ್ತ್ರ ಹೊಂದಲು ಅರ್ಜಿ, ಶಸ್ತ್ರದ ತಪಾಸಣೆಗೆ ಅರ್ಜಿ, ಮಾರಾಟ ಅಥವಾ ವರ್ಗಾವಣೆಗೆ ಅನುಮತಿ ಅರ್ಜಿ ಸಲ್ಲಿಸಬಹುದಾಗಿದೆ.
ಅವಧಿ ವಿಸ್ತರಣೆ ಅರ್ಜಿ, ನಿಯೋಜಿತರನ್ನ ಸೇರಿಸಲು ಹಾಗೂ ತೆಗೆಯಲು ಅರ್ಜಿ ಶಸ್ತ್ರಾಸ್ತ್ರ ಹಿಂಪಡೆಯಲು, ವಿಳಾಸ ಬದಲಾವಣೆಗೆ ಅರ್ಜಿ ಸೇರಿದಂತೆ ವಿವಿಧ ರೀತಿಯ ಸೇವೆಗಳು ಅಪ್ಲಿಕೇಷನ್​​​​ನಲ್ಲಿ ಇರಲಿವೆ. ಸದ್ಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಶಸ್ತ್ರಾಸ್ತ್ರ ಸಂಬಂಧಿತ ಆ್ಯಪ್ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ