ಬಿಜೆಪಿ ವಿರುದ್ಧ ಮುತಾಲಿಕ್ ಆಕ್ರೋಶ

ಬುಧವಾರ, 30 ನವೆಂಬರ್ 2022 (11:26 IST)
ಧಾರವಾಡ : ಶಾಸಕ ಗರುಡಾಚಾರ್ ಅವರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಡರಾತ್ರಿ ಒಂದು ಗಂಟೆಗೆ ಪುನೀತ್ ಕೆರೆ ಹಳ್ಳಿ, ತೇಜಸ್ ಗೌಡ ಎನ್ನುವ ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತರನ್ನು ರೌಡಿಗಳ ರೀತಿಯಲ್ಲಿ ಬಂಧನ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಅದೂ ಸಹ ಬಿಜೆಪಿ ಸರ್ಕಾರದಲ್ಲೇ ಹಿಂದೂ ಕಾರ್ಯಕರ್ತರನ್ನು ಈ ರೀತಿ ಬಂಧಿಸಿದ್ದು ಸರಿಯಲ್ಲ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ