ನನ್ನ ಪತಿ ಕೆಟ್ಟವನು, ಯುವತಿಯರ ಅಶ್ಲೀಲ ವಿಡಿಯೋ ತೆಗಿತಾನೆ: ಪೊಲೀಸ್‌ಗೆ ಪತ್ನಿ ದೂರು

ಗುರುವಾರ, 3 ನವೆಂಬರ್ 2016 (15:23 IST)
ನಗರದ ಕೆಳಕೋಟೆ ಪ್ರದೇಶದ ನಿವಾಸಿಯಾಗಿರುವ ಪತಿ ತಿಪ್ಪೆಸ್ವಾಮಿ ಯುವತಿಯರ ಅಶ್ಲೀಲ ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ನೊಂದ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ಪತಿ ತಿಪ್ಪೇಸ್ವಾಮಿ ವಿವಾಹಕ್ಕಿಂತ ಮುಂಚೆ ಕೂಡಾ ಯುವತಿಯರ ಅಶ್ಲೀಲ ಚಿತ್ರಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡಿ ಜೈಲಿಗೂ ಹೋಗಿ ಬಂದಿದ್ದಾನೆ. ಇದೀಗ ವಿವಾಹದ ನಂತರವೂ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.
 
ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿಯನ್ನು ಕೂಡಾ ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದಾನೆ. ಹಲವಾರು ಯುವತಿಯರಿಗೆ ಬ್ಲ್ಯಾಕ್ ‌ಮೇಲ್ ಮಾಡಿದ್ದಾನೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಗರಾಜನ್ ಅವರಿಗೆ  ದೂರು ನೀಡಿದ್ದಾಳೆ.
 
ಮಹಿಳೆ ರೇಖಾ ದೂರು ನೀಡಿದ್ದರಿಂದ ಆಕೆಯ ಪತಿ ತಿಪ್ಪೇಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌.ಪಿ.ರಂಗರಾಜನ್ ಭರವಸೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ