ನನ್ನ ಟೆಲಿಫೋನ್ ಕದ್ದಾಲಿಕೆ ಮಾಡ್ತಿಲ್ಲ, ಮಾಡಿದರೂ ಪ್ರಯೋಜನವಿಲ್ಲ: ರಾಮಲಿಂಗಾರೆಡ್ಡಿ
ಮಂಗಳವಾರ, 7 ನವೆಂಬರ್ 2017 (13:39 IST)
ಬೆಂಗಳೂರು: ಕಾಂಗ್ರೆಸ್ ಪ್ರಮುಖ ಸಚಿವರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಮೊದಲೇ ಹೇಳಿದ್ದೆ. ನನ್ನ ಟೆಲಿಫೋನ್ ಕದ್ದಾಲಿಕೆ ಮಾಡುತ್ತಿಲ್ಲ. ಮಾಡಿದರೂ ಏನು ಪ್ರಯೋಜನವಿಲ್ಲ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಲಿಫೋನ್ ಟ್ಯಾಪ್ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲ್ ಸಾಕ್ಷ್ಯಾಧಾರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ದೂರು ನೀಡಿಲ್ಲ. ಲಿಂಗಾಯಿತ ವೀರಶೈವ ವಿವಾದದ ಕಾರಣ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಲಿಂಗಾಯಿತ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಇದು ಬಿಜೆಪಿಗೆ ತಳಮಳ ಉಂಟುಮಾಡಿದೆ. ಹೀಗಾಗಿ ಫೋನ್ ಕದ್ದಾಲಿಕೆ ಮೊದಲಾದ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಎಂದರು.
ನೋಟ್ ಬ್ಯಾನ್ ನಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡ್ರು. ರಾಜ್ಯ, ರಾಷ್ಟ್ರದಲ್ಲಿ ಅನೇಕ ಉದ್ದಿಮೆಗಳು ಕ್ಲೋಸ್ ಆಗಿವೆ. ಇದೇ ಮೋದಿಯವರ ಸಾಧನೆ. ಕಪ್ಪುಹಣ ವಾಪಸ್ ಬಂದಿಲ್ಲ. ಹೊಸ ನೋಟ್ ಪ್ರಿಂಟ್ ಮಾಡೋಕೆ ನಮ್ಮದೆ ಹೆಚ್ಚು ಹಣ ಲಾಸ್ ಆಯ್ತು. ಕೇಂದ್ರ ಸರ್ಕಾರ ದೇಶದ ಜನರನ್ನ ಬಡತನಕ್ಕೆ ತಳ್ಳುತ್ತಿದ್ದಾರೆ. ನೋಟ್ ಬ್ಯಾನ್ ನಿಂದ ಆರ್ಥಿಕ ಕುಸಿತವಾಗಿದೆ. ಕೇಂದ್ರದ ನಿಲುವು ಹೀಗೆ ಮುಂದುವರಿದ್ರೆ ನಾಲ್ಕೈದು ವರ್ಷಗಳಲ್ಲಿ ಭಾರತ ಬಡ ದೇಶವಾಗುತ್ತೆ. ಇದೇ ಬಿಜೆಪಿ, ಮೋದಿಯವರ ಸಾಧನೆ ಎಂದರು.