‘ಧರ್ಮಕ್ಕಾಗಿ ನನ್ನ ಬಲಿದಾನವಾದ್ರೂ ಪರವಾಗಿಲ್ಲ’

ಬುಧವಾರ, 20 ಏಪ್ರಿಲ್ 2022 (19:53 IST)
ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಪ್ರಚಲಿತಕ್ಕೆ ಬಂದ ಹಿಂದವೀ ಮೀಟ್ ಮಾರ್ಟ್ ಬಿಬಿಎಂಪಿಯಿಂದ ಪರವಾನಗಿಯನ್ನೇ ಪಡೆದಿಲ್ಲ. ಹೀಗೆ ಅಗತ್ಯ ಅನುಮತಿ ಇಲ್ಲದೆ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ ನೋಟಿಸ್​ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ನನ್ನ ಅಂಗಡಿ ಸುತ್ತಲೂ ಕೆಲವರು ಅನವಶ್ಯಕವಾಗಿ ಓಡಾಡುತ್ತಿದ್ದಾರೆ. ಧರ್ಮಕ್ಕಾಗಿ ನನ್ನ ಬಲಿದಾನವಾದ್ರೂ ಪರವಾಗಿಲ್ಲ. ಸಂತೋಷವಾಗಿ ಇರ್ತೀನಿ. ನಾವು ಸಂಘದ ಕಾರ್ಯಕರ್ತರು ಹಿಡಿದ ಕೆಲಸವನ್ನು ಬಿಡೋದಿಲ್ಲ. "ಬಿಬಿಎಂಪಿ ನಿಯಮವನ್ನು ಪಾಲಿಸುವಂತೆ ಬಿಬಿಎಂಪಿ ನೊಟೀಸ್ ನೀಡಿದೆ ಅದನ್ನು ನಾವು ಪಾಲಿಸುತ್ತೇವೆ. ಸಹಜವಾಗಿ ಏಪ್ರಿಲ್ ನಲ್ಲಿ ಟ್ರೇಡ್ ಲೈಸನ್ಸ್ ರಿನಿವಲ್ ಮಾಡಬೇಕಿದೆ. ಹಣವನ್ನು ಕಟ್ಟಿ ನವೀಕರಿಸಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ