ವಾಮಾಚಾರ ಹೆಸರಲ್ಲಿ ಹತ್ಯೆಗೈದ ಮೂವರು ಸ್ನೇಹಿತರನ್ನು ಕೌಲಂದೆ ಪೊಲೀಸರು ಬಂಧಿಸಿದ್ದಾರೆ.
ಈ ಪೈಕಿ ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತನ್ನ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ. ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ ಇವರಲ್ಲಿ ಗಾಢವಾಗಿತ್ತು.
ಇದೇ ದೃಷ್ಟಿಯಿಂದ ಭಾನುವಾರ ಮಹೇಶ್‌ನನ್ನು ಪುಸಲಾಯಿಸಿದ ಈ ಮೂವರು ಕಿರಾತಕರು, ಕೆರೆ ಬಳಿಗೆ ಕರೆತಂದಿದ್ದಾರೆ. ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ. ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ, ಅದರ ಮೇಲೆ ಮಹೇಶ್ ಹೆಸರು ಬರೆದು, ನಂತರ ಪೂಜೆ ಮಾಡಿದ್ದಾರೆ.
ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ.ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ. ಗೊಂಬೆ,ಕೋಳಿ,ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ
ಕೌಲಂದೆ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೂವರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.