ಮಂಡ್ಯ : ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈ ಶುಗರ್ ಇಂದಿನಿಂದ ಕಾರ್ಯಾಚರಣೆ ನಡೆಸಲಿದೆ.
2017-18 ನೇ ಸಾಲಿನಲ್ಲಿ ಬಾಯ್ಲರ್, ಟರ್ಬೈನ್ ಸಮಸ್ಯೆ ಸೇರಿದಂತೆ ನೂರಾರು ಕೋಟಿ ರೂಪಾಯಿ ಸಾಲದ ಹೊಣೆಗಾರಿಕೆಯಿಂದ ನಷ್ಟಕ್ಕೆ ಸಿಲುಕಿ ಕಾರ್ಖಾನೆ ಬಂದ್ ಆಗಿತ್ತು.
ಇದಾದ ಬಳಿಕ ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿತ್ತು. ಆದರೆ ರೈತರ ಪ್ರತಿಭಟನೆಯಿಂದ ಈ ನಿರ್ಧಾರ ಕೈ ಬಿಟ್ಟಿತು.
ಈಗ ಸರ್ಕಾರ ಮೈ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ನಿರ್ಧಾರ ಮಾಡಿದೆ. ಈ ಇಂದು ಮೈ ಶುಗರ್ ಕಾರ್ಖಾನೆಯ ಬಾಯ್ಲರ್ಗೆ ಸಚಿವರಾದ ಗೋಪಾಲಯ್ಯ, ಶಂಕರ್ ಪಾಟೀಲ್ ಹಾಗೂ ನಾರಾಯಣಗೌಡ ಅಗ್ನಿ ಸ್ಪರ್ಶ ಮಾಡುವ ಮೂಲಕ ನಾಲ್ಕು ವರ್ಷಗಳ ಬಳಿಕ ಮೈ ಶುಗರ್ ಆರಂಭಕ್ಕೆ ಚಾಲನೆ ನೀಡಲಿದ್ದಾರೆ.