ಉಕ್ಕು ಕಾರ್ಖಾನೆ ಮೇಲೆ ರಷ್ಯಾ ದಾಳಿ

ಸೋಮವಾರ, 25 ಏಪ್ರಿಲ್ 2022 (11:19 IST)
ಕೀವ್ : ರಷ್ಯಾ ಸೇನೆ ಬಹುತೇಕ ವಶಕ್ಕೆ ಪಡೆದುಕೊಂಡಿರುವ ಬಂದರು ನಗರ ಮರಿಯುಪೋಲ್ನಲ್ಲಿ ಉಳಿದಿರುವ ಉಕ್ರೇನ್ನ ಕೊನೆಯ ತುಕಡಿಯನ್ನು ಹೊರಹಾಕುವ ಉದ್ದೇಶದಿಂದ ಇಲ್ಲಿನ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಪಡೆಗಳು ವಾಯುದಾಳಿ ನಡೆಸಿವೆ.
 
ರಷ್ಯಾದ ಉಕ್ಕು ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲು ಸುಮಾರು 2000 ಯೋಧರು ಹೋರಾಟ ನಡೆಸುತ್ತಿದ್ದಾರೆ. ಅತಿ ದೂರಕ್ಕೆ ದಾಳಿ ಮಾಡಬಲ್ಲ ವಿಮಾನಗಳನ್ನುಬಳಸಿ ರಷ್ಯಾ ದಾಳಿ ನಡೆಸುತ್ತಿದೆ.

ಮರಿಯುಪೋಲ್ನಲ್ಲಿ ಉಳಿದಿರುವ ಜನರಿಗೆ ಆಹಾರದ ಅಭಾವ ಎದುರಾಗಿದೆ. ಇದೇ ವೇಳೆ ರಾಜಧಾನಿ ಕೀವ್ನಿಂದ ತನ್ನ ಸೇನೆಯನ್ನು ಹಿಂಪಡೆಯುತ್ತಿರುವ ರಷ್ಯಾ ಉಳಿದ ನಗರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.

ಯುದ್ಧ ಆರಂಭವಾದಾಗಿನಿಂದಲೂ ಬಂದರು ನಗರ ಮಾರಿಯುಪೋಲ್ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ