ಸ್ವಪಕ್ಷೀಯರಿಂದಲೇ ನನ್ನ ತೇಜೋವಧೆ, ಹಲ್ಲೆಗೆ ಯತ್ನ: ಮುಡಾ ಅಧ್ಯಕ್ಷ ಮರೀಗೌಡ ಬೇಸರ

Sampriya

ಸೋಮವಾರ, 30 ಸೆಪ್ಟಂಬರ್ 2024 (14:04 IST)
ಮೈಸೂರು: ಸದ್ಯಕ್ಕೆ ರಾಜೀನಾಮೆ ಕೊಡುವ ಯೋಚನೆ ಇಲ್ಲ. ಸಿದ್ದರಾಮಯ್ಯ ಅವರೇ ನನ್ನ ಹೈಕಮಾಂಡ್. ಅವರು ಸೂಚಿಸಿದರೆ ರಾಜೀನಾಮೆಗೂ ಸಿದ್ದನಿದ್ದೇನೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯರ ಇಂದಿನ ಸ್ಥಿತಿಗೆ ನಾನೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ನ ಕೆಲ ಕಾರ್ಯಕರ್ತರು ಕಳೆದ ಶುಕ್ರವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಸ್ವಪಕ್ಷೀಯರ ಈ ಗಲಾಟೆ ತೀವ್ರ ನೋವು ತಂದಿದೆ ಎಂದು ಹೇಳಿದರು.

50:50 ನಿವೇಶನಗಳ ಹಂಚಿಕೆ ಆಗಿರುವುದು 2020ರಿಂದ. ನಾನು ಮುಡಾ ಅಧ್ಯಕ್ಷ ಆಗಿದ್ದು 2024ರ ಮಾರ್ಚ್ 1ರಿಂದ. ಹೀಗಾಗಿ ಹಿಂದಿನ ಪ್ರಕರಣಗಳಿಗೂ ನನಗೂ ಸಂಬಂಧ ಇಲ್ಲ ಎಂದರು.

ಸಿದ್ದರಾಮಯ್ಯ ನನ್ನ ಮನೆದೇವರು. ಎಂದಿಗೂ ಅವರು ಹಾಗೂ ಅವರ ಕುಟುಂಬಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿನ್ನ ಕಾಲದಲ್ಲಿ ಏನು ಆಗಿಲ್ಲ ಬಿಡು ಎಂದು ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಮಾಧಾನ ಮಾಡಿದ್ದಾರೆ‌. ಸ್ವಪಕ್ಷೀಯರು ನನ್ನ ತೇಜೋವಧೆ ಮಾಡುವುದನ್ನು ಇನ್ನಾದರೂ ಬಿಡಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ