ಮೈಸೂರು ದಸರಾ ಮಹೋತ್ಸವ 2020 ಹಿನ್ನಲೆ; ಅರಮನೆಯಲ್ಲಿ ವಿಜಯದಶಮಿ ಜಂಬೂಸವಾರಿ ಮೆರವಣಿಗೆ

ಸೋಮವಾರ, 26 ಅಕ್ಟೋಬರ್ 2020 (12:14 IST)
ಮೈಸೂರು : ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020 ಹಿನ್ನಲೆಯಲ್ಲಿ ಇಂದು ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿ ಮೆರವಣೆಗೆ ನಡೆಯುತ್ತಿದೆ.

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುವುದು . ಶುಭ  ಮಕರ ಲಗ್ನದಲ್ಲಿ ಇಂದು ಮಧ್ಯಾಹ್ನ 2.59ರಿಂದ 3.20ರ ಸಮಯದಲ್ಲಿ ಸಿಎಂ ಬಿಎಸ್ ವೈ ಅವರಿಂದ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಮಧ್ಯಾಹ್ನ 3.40ರಿಂದ 4.15ರ ಸಮಯದಲ್ಲಿ  ಸಿಎಂ ಬಿಎಸ್ ವೈ ಸೇರಿದಂತೆ ಹಲವು ಗಣ್ಯರಿಂದ ಪುಷ್ಪಾರ್ಚನೆ ಮಾಡಿಸಲಾಗುವುದು.

ಹಾಗೇ ಕೊರೊನಾ ಹಿನ್ನೆಲಯಲ್ಲಿ 5.5 ಕಿ.ಮಿ ಸಾಗುತ್ತಿದ್ದ ಜಂಬೂ ಸವಾರಿಯನ್ನು ಈ ಬಾರಿ ಅರಮನೆಯ ಆವರಣದಲ್ಲಿಯೇ ನಡೆಸಲಾಗುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ