ಮೈಸೂರಿನಲ್ಲಿ ದಸರಾ ಸಂಭ್ರಮವಿದ್ದರೂ ರಾಜಮಾತೆ ಪ್ರಮೋದಾದೇವಿಗೆ ಬೇಸರ!
ಪ್ರಮೋದಾದೇವಿ ತಾಯಿ ಪುಟ್ಟ ಚಿನ್ನಮ್ಮಣಿ ಇಂದು ನಿಧನರಾಗಿದ್ದು, ಪ್ರಮೋದಾದೇವಿಗೆ ಮಾತೃವಿಯೋಗ ಎದುರಾಗಿದೆ. ಹೀಗಾಗಿ ಈ ಬಾರಿ ದಸರಾ ಸಂಭ್ರಮದಲ್ಲಿದ್ದ ರಾಜಮನೆತನಕ್ಕೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಚಿನ್ನಮ್ಮಣಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಮೈಸೂರು ಅರಮನೆಯಲ್ಲಿ ವಿಧಿವಿಧಾನಗಳ ಪ್ರಕಾರ ದಸರಾ ಉತ್ಸವ ಆಚರಣೆ ಮಾಡಲಾಗುತ್ತಿದ್ದು, ಇಂದು ಜಂಬೂ ಸವಾರಿಗೆ ಮುನ್ನ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ನೆರವೇರಿಸಲಾಗುತ್ತಿದೆ. ರಾಜ ಯದುವೀರ್ ಒಡೆಯರ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ.