ಮೈಸೂರು ದಸರಾ ವೀಕ್ಷಿಸಬೇಕೆಂದರೆ ಟಿಕೆಟ್ ಬಲು ದುಬಾರಿ: ಇಲ್ಲಿದೆ ಟಿಕೆಟ್ ದರ ವಿವರ

Krishnaveni K

ಶುಕ್ರವಾರ, 27 ಸೆಪ್ಟಂಬರ್ 2024 (12:21 IST)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ದಸರಾ ಮಹೋತ್ಸವ ವೀಕ್ಷಿಸಲು ಟಿಕೆಟ್ ದರ ನಿಗದಿಯಾಗಿದ್ದು, ಯಾವಾಗ ಮಾರಾಟ ಶುರು ಎಂಬಿತ್ಯಾದಿ ಡೀಟೈಲ್ಸ್ ಇಲ್ಲಿದೆ.

ಮೈಸೂರು ದಸರಾ ಮಹೋತ್ಸವದ ಟಿಕೆಟ್ ಆನ್ ಲೈನ್ ನಲ್ಲೂ ಲಭ್ಯವಿದೆ. ಟಿಕೆಟ್ ದರವೂ ನಿಗದಿಯಾಗಿದೆ. ಕೊಂಚ ದುಬಾರಿಯೆನಿಸಿದರೂ ಮೈಸೂರು ದಸರಾ ವೀಕ್ಷಿಸುವ ಸಂಭ್ರಮವಿದ್ದರೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಶನಿವಾರದಿಂದಲೇ ಟಿಕೆಟ್ ಗಳು ಲಭ್ಯವಾಗಲಿದೆ. ಗೋಲ್ಡ್ ಕಾರ್ಡ್ ಮತ್ತು ಸಾಮಾನ್ಯ ಟಿಕೆಟ್ ಲಭ್ಯವಿರಲಿದೆ. ಆದರೆ ಸೆಪ್ಟೆಂಬರ್ 30 ರೊಳಗೆ ಟಿಕೆಟ್ ಖರೀದಿ ಮಾಡಬೇಕು.

ಗೋಲ್ಡ್ ಕಾರ್ಡ್ ಟಿಕೆಟ್ ಗೆ 6,500 ರೂ. ನಿಗದಿ ಮಾಡಲಾಗಿದೆ. ಗೋಲ್ಡ್ ಕಾರ್ಡ್ ಪಡೆದವರಿಗೆ ಜಂಬೂ ಸವಾರಿ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ ವೀಕ್ಷಣೆಗೆ ಅವಕಾಶವಿದೆ. ಇದು ಒಬ್ಬರಿಗೆ ಮಾತ್ರ. ಇಬ್ಬರಿಗೆ ಬೇಕಾದರೆ ಮತ್ತೊಂದು ಟಿಕೆಟ್ ಪಡೆದುಕೊಳ್ಳಬೇಕು.

ಬೇರೆಲ್ಲಾ ಬೇಡ, ಕೇವಲ ಮೈಸೂರು ದಸರಾ ಜಂಬೂ ಸವಾರಿ ಮಾತ್ರ ಸಾಕು ಎಂದರೆ 3,500 ರೂ. ಬೆಲೆ ಟಿಕೆಟ್ ಪಡೆದುಕೊಳ್ಳಬಹುದು. ಕೇವಲ ಪಂಜಿನ ಕವಾಯತು ವೀಕ್ಷಿಸಬೇಕೆಂದರೆ 1,000 ರೂ. ಟಿಕೆಟ್ ಪಡೆದುಕೊಳ್ಳಬೇಕು. https://www.mysoredasara.gov.in/  ಎಂಬ ವೆಬ್ ಸೈಟ್ ನಲ್ಲಿ ಟಿಕೆಟ್ ಖರೀದಿ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ