ಬೆಳಗ್ಗೆ ನಿಯತ್ತಿನ ಆಟೋ ಚಾಲಕ… ರಾತ್ರಿಯಾಗುತ್ತಿದ್ದಂತೆ ಏನ್ ಮಾಡ್ತಿದ್ದ ಗೊತ್ತಾ…?
ಶನಿವಾರ, 28 ಅಕ್ಟೋಬರ್ 2017 (18:12 IST)
ಮೈಸೂರು: ಈಗಿನ ಕಾಲದಲ್ಲಿ ಯಾರನ್ನ ನಂಬೋದು ಬಿಡೋದು ಅನ್ನೋದೆ ತಿಳಿಯುತ್ತಿಲ್ಲ. ಬೆಳಗ್ಗೆ ಆಟೋರಿಕ್ಷಾ ಓಡಿಸಿಕೊಂಡು ರಾತ್ರಿಯಾಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಗೌಸಿಯಾನಗರ ನಿವಾಸಿ ಅಸ್ಲಾಂ(27) ಬಂಧಿತ ಆರೋಪಿ. ಈತ ಹಗಲಿನಲ್ಲಿ ಆಟೋ ಓಡಿಸುತ್ತ ಯಾವ ಮನೆಯಲ್ಲಿ ಕಳವು ಮಾಡಬೇಕೆಂದು ಕಣ್ಣಿಡುತ್ತಿದ್ದ. ಮನೆಯಲ್ಲಿರುವ ಪುರುಷರು ಬೆಳಗಿನ ಜಾವ ನಮಾಜ್ ಗೆ ತೆರಳುತ್ತಿದ್ದ ಮನೆಗೆ ನುಗ್ಗಿ ತನ್ನ ಕೈಚಳಕ ತೋರುತ್ತಿದ್ದ.
ಇದರಿಂದ ರೊಚ್ಚಿಗೆದ್ದಿದ್ದ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾತ್ರಿ ಆಟೋ ಓಡಿಸಿ ಬೆಳಗಿನ ಜಾವ ಮನೆಯೊಂದರಲ್ಲಿ ಕಳವು ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ನಂತರ ಅಸ್ಲಾಂನನ್ನು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ.
ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ ಬಳಿಕ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.