ಬೇಲಿ ಹಾರಿ ಹಳೆಯ ಝಲಕ್ ತೋರಿಸಿದ ಕಿರಣ್ ಬೇಡಿ

ಶುಕ್ರವಾರ, 27 ಅಕ್ಟೋಬರ್ 2017 (09:35 IST)
ಪುದುಚೇರಿ: ಕಿರಣ್ ಬೇಡಿ ಎಂದರೆ ದೇಶ ಕಂಡ ಪ್ರಥಮ ಸಾಹಸಿ ಪೊಲೀಸ್ ಅಧಿಕಾರಿ. ಇದೀಗ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವ 68 ವರ್ಷದ ಕಿರಣ್ ಬೇಡಿ ತಮ್ಮ ಹಳೆಯ ಝಲಕ್ ತೋರಿಸಿದ್ದಾರೆ.

 
ಪುದುಚೇರಿಯಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ಪರಿಶೀಲನೆಗೆ ಅಧಿಕಾರಿಗಳ ಜತೆಗೆ ಆಗಮಿಸಿದ್ದ ಕಿರಣ್ ಬೇಡಿ, ಅಲ್ಲಿ ಬೀಗ ಕಳೆದು ಹೋಗಿದ್ದ ಕಾರಣ ನೇರ ದ್ವಾರದಿಂದ ಪ್ರವೇಶಿಸಲಾಗಲಿಲ್ಲ. ಹೀಗಾಗಿ 3.5 ಅಡಿ ಎತ್ತರದ ಗೋಡೆಯನ್ನು ಎಲ್ಲರೂ ನೋಡುತ್ತಿದ್ದ ಹಾಗೆ ಕಿರಣ್ ಬೇಡಿ ಹಾರಿಯೇ ಬಿಟ್ಟರು.

ಜತೆಗೆ ತಮ್ಮ ಹಿಂದಿನ ದಿನಗಳ ಝಲಕ್ ತೋರಿಸಿದರು. ನಂತರ ಆಸ್ಪತ್ರೆಯೊಳಗೆ ಪ್ರವೇಶಿಸಿದ ಅವರು ಅಲ್ಲಿನ ಕೊಳೆ, ಕೆಟ್ಟ ಪರಿಸರ ನೋಡಿ ಸಿಡಿಮಿಡಿಗೊಂಡ ಅವರುತಕ್ಷಣ ಎಲ್ಲವನ್ನೂ ಶುಚಿಗೊಳಿಸಲು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ