ಮೈಸೂರಿನಲ್ಲಿ ಮುಸ್ಲಿಂ ಯುವಕರ ದಾಂಧಲೆಗೆ ನಿಜ ಕಾರಣವೇನು: ಕೆಲವೇ ಕ್ಷಣಗಳಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದೇಗೆ

Krishnaveni K

ಮಂಗಳವಾರ, 11 ಫೆಬ್ರವರಿ 2025 (09:56 IST)
ಮೈಸೂರು: ಮುಸ್ಲಿಂ ಯುವಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೆಲವೇ ಗಂಟೆಗಳಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದು ಹೇಗೆ ಎಂಬ ಅನುಮಾನ ಈಗ ಶುರುವಾಗಿದೆ.

ದೆಹಲಿ ಚುನಾವಣೆ ಫಲಿತಾಂಶ ಬಂದ ಬಳಿಕ ಯುವಕನೊಬ್ಬ ಅನ್ಯ ಕೋಮಿನ ಭಾವನೆಗೆ ಧಕ್ಕೆಯಾಗುವಂತೆ ಪೋಸ್ಟ್ ಮಾಡಿದ್ದ. ಇದರಿಂದ ಕೆರಳಿದ ಮುಸ್ಲಿಂ ಯುವಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ್ದಾರೆ.

ಘಟನೆ ಬಳಿಕ ಸ್ಥಳದಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಪತ್ತೆಯಾಗಿತ್ತು. ಗಲಭೆ ನಡೆಸಲು ಇಲ್ಲಿ ಮೂಟೆಗಟ್ಟಲೆ ಕಲ್ಲು ತಂದಿಟ್ಟವರು ಯಾರು ಎಂಬ ಅನುಮಾನ ಪೊಲೀಸರಿಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಇದೀಗ ಪೊಲೀಸರು ಕಲ್ಲುಗಳನ್ನು ಸಂಗ್ರಹಿಸುತ್ತಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಲ್ಲು ತೂರಾಟ ನಡೆಸಿದವರ ಬಗ್ಗೆ ವಿವರ ಸಂಗ್ರಹಿಸುತ್ತಿದ್ದಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಪೋಸ್ಟ್ ಹಾಕಿದ್ದ ಸುರೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೈಸೂರು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ