ಕೊರೊನಾದಿಂದ ಪ್ರಾಣಿಗಳ ನೋಡಿಕೊಳ್ಳಲು ನಿರ್ವಹಣೆಯ ದರ ಹಾಗೂ ಇತರ ವಸ್ತುಗಳು ದುಬಾರಿಯಾದ ಹಿನ್ನೆಲೆಯಲ್ಲಿ ಮೃಗಾಲಯ ಪ್ರಾಧಿಕಾರ ಪ್ರಾಣಿಗಳ ದತ್ತು ಸ್ವೀಕಾರ ದರವನ್ನು ಹೆಚ್ಚಳ ಮಾಡಿದೆ. ಇನ್ನು ಮೈಸೂರು ಮೃಗಾಲಯದಲ್ಲಿ ಮೊದಲು ಪರಿಚಯಿಸಲಾದ ಪ್ರಾಣಿ ದತ್ತು ಯೋಜನೆ ಅಡಿಯಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು 13 ಗುಂಪುಗಳಲ್ಲಿ ಜಾತಿವಾರು ವರ್ಗೀಕರಿಸಲಾಗಿದೆ ಮತ್ತು ನಂತರ ಅವುಗಳನ್ನು ಇತರ ಪ್ರಾಣಿ ಸಂಗ್ರಹಾಲಯಗಳಿಗೆ ವಿಸ್ತರಿಸಲು ಪ್ರಾಣಿ ಪ್ರಿಯರಿಗೆ ಸಹಾಯ ಮಾಡಲು ನಿರ್ವಹಣಾ ವೆಚ್ಚದ ಆಧಾರದ ಮೇಲೆ ಶುಲ್ಕವನ್ನು ಹೆಚ್ಚಿಸಲಾಗಿದೆ.
ಪ್ರಾಣಿಗಳ ದತ್ತು ಸ್ವೀಕಾರ ದರವನ್ನು ಮೂರು ವಲಯದಲ್ಲಿ ಹೆಚ್ಚಳ ಮಾಡಲಾಗಿದ್ದು, ವಜ್ರ ವರ್ಗ, ಚಿನ್ನದ ವರ್ಗ, ಬೆಳ್ಳಿ ವರ್ಗ ಮತ್ತು ಕಂಚಿನ ವರ್ಗ ಎಂದು ವರ್ಗೀಕರಿಸಲಾಗಿದೆ. ವರ್ಗಗಳ ಮೂಲಕ ವಾರ್ಷಿಕವಾಗಿ ₹1,000 ರಿಂದ ₹3,00,000 ಮೊತ್ತಕ್ಕೆ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಬಹುದಾಗಿದೆ..