ಮೈಷುಗರ್ ಸಕ್ಕರೆ ಕಾರ್ಖಾನೆ ಮತ್ತೆ ಸರ್ಕಾರಿ ತೆಕ್ಕೆಗೆ
ಮೈಷುಗರ್ ಸಕ್ಕರೆ ಕಾರ್ಖಾನೆ ಮತ್ತೆ ಸರ್ಕಾರಿ ತೆಕ್ಕೆಗೆ ಬರಲು ಮಾಜಿ ಸಿಎಂ ಕುಮಾರಸ್ವಾಮಿ ಅವರ ಶ್ರಮವೂ ಇದೆ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಹೇಳಿದ್ರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸರ್ಕಾರ ನಿರ್ಧರಿಸಿ ಕ್ಯಾಬಿನೆಟ್ ನಲ್ಲಿ ಘೋಷಿಸಿತ್ತು. ಆದರೆ ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕರ ನಿಯೋಗ ತೆರಳಿ ಅದನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಕಾರ್ಖಾನೆ ಮತ್ತೆ ಸರ್ಕಾರಿ ಸ್ವಾಮ್ಯದ ಪರ ಬರಲು ಕುಮಾರಸ್ವಾಮಿ ಪರಿಶ್ರಮ ಮಹತ್ವದ್ದು ಎಂದು ಶಾಸಕ ಅನ್ನದಾನಿ ಹೇಳಿದ್ರು.