ಪೊಲೀಸರು ಕೇಸರಿ ಉಡುಪು ಧರಿಸಿದಕ್ಕೆ ವಿರೋಧ ವ್ಯಕ್ತಪಡಿಸಿ, ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರಾಳ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಆರ್‌ಎಸ್‌ಎಸ್ ಸಂಘದ ಮೂಲದವರಾಗಿದ್ದಾರೆ.
ಅವರಿಗೆ ಕೂತರೂ,ನಿಂತರೂ, ಆರ್‌ಎಸ್‌ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದು ಕಿಡಿಕಾರಿದರು. ಅದಲ್ಲದೆ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ದಸರಾ ಹಬ್ಬದ ದಿವಸ ಪೊಲೀಸರು ಕೇಸರಿ ಬಟ್ಟೆಯನ್ನು ಧರಿಸಿದ್ದಾರೆ. ಇಲ್ಲಿಯವರೆಗೂ ಯಾವ ಬಾರಿಯು ಕೇಸರಿ ಉಡುಪನ್ನು ಧರಿಸಿರಲಿಲ್ಲ. ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.