ಮೈಸೂರು: ರಾಜ್ಯದಲ್ಲಿ ವಿಪರೀತ ಬಿಸಿಲಿನ ನಡುವೆ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದೆ. ನಿನ್ನೆ ಸಂಜೆ ಮೈಸೂರಿನಲ್ಲಿ ಸುರಿದ ಭಾರೀ ಮಳೆಯಿಂದ ಸಂಭ್ರಮ ಒಂದೆಡೆಯಾದರೆ ಆಪತ್ತು ಕೂಡಾ ಬಂದಿದೆ.
ಮೈಸೂರಿಗೆ ಇದು ಕಳೆದ ಒಂದು ವಾರದಲ್ಲಿ ಎರಡನೇ ಮಳೆ. ಸತತ ಬಿಸಿಲಿನ ನಡುವೆ ನಿನ್ನೆ ಸಂಜೆ ಮೈಸೂರಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಲವೆಡೆ ರೈತರು ಬೆಳೆದ ಬೆಳೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದ ಬೆಳೆದ ಬೆಳೆ ನೆಲಕಚ್ಚಿದೆ. ಅಕಾಲಿಕ ಮಳೆ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಇನ್ನು, ಇಂದೂ ಕೂಡಾ ಮೈಸೂರಿನಲ್ಲಿ ಮಳೆಯ ಸೂಚನೆಯಿದೆ. ನಿನ್ನೆ ಮೈಸೂರಿನಲ್ಲಿ ಮಳೆಯ ಪರಿಣಾಮ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಬೆಂಗಳೂರಿಗೆ ಮಳೆಯ ಸೂಚನೆಯಿಲ್ಲ.