ಜಂಬೂ ಸವಾರಿಗೆ ಅರ್ಜುನನ ಬಳಗ ರೆಡಿ...

ಮಂಗಳವಾರ, 11 ಅಕ್ಟೋಬರ್ 2016 (10:44 IST)
ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ವಿಜಯದಶಮಿಯ ಜಂಬೂ ಸವಾರಿಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. 
ಇಂದು ಮುಂಜಾನೆ ರಾಜಮನೆತನದವರು ಯದುವಂಶದ ಶಾಪ ವಿಮೋಚನೆಗಾಗಿ ಅರಮನೆಯ ಅಲಮೇಲಮ್ಮನಿಗೆ ವಿಶೇಷ ಪೂಜೆ ಪುರಸ್ಕಾರ ಸಲ್ಲಿಸಿದರು. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. 
 
ಇಂದು ಸಂಜೆ ವೇಳೆಗೆ ನಾಡಿನ ಅಧಿದೇವತೆ ಚಾಮುಂಡಿಯನ್ನು ಹೊತ್ತು ಅರ್ಜುನ ತನ್ನ ಜೊತೆಗಾರರೊಂದಿಗೆ ಅರಮನೆ ನಗರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಕೋಟ್ಯಾಂತರ ಜನರು ಐತಿಹಾಸಿಕ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯ್ತಿದ್ದು, ಮೈಸೂರಿನಲ್ಲಿ ದೇಶ ವಿದೇಶಗಳ ಪ್ರವಾಸಿಗರ ದಂಡೇ ಸೇರಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ