ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಲಗೇಜ್ ಲಾಕರ್ ವ್ಯವಸ್ಥೆ: ಹೇಗೆ ಕಾರ್ಯನಿರ್ವಿಹಿಸುತ್ತದೆ, ಎಷ್ಟು ಶುಲ್ಕ ಮಾಹಿತಿ ಇಲ್ಲಿದೆ

Krishnaveni K

ಗುರುವಾರ, 14 ನವೆಂಬರ್ 2024 (10:11 IST)
Photo Credit: X
ಬೆಂಗಳೂರು: ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ತಾ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಲಾಕರ್ ವ್ಯವಸ್ಥೆ ಮಾಡಿದೆ. ಇದರ ಕಾರ್ಯನಿರ್ವಹಣೆ ಹೇಗೆ, ಎಷ್ಟು ಶುಲ್ಕ ಇತ್ಯಾದಿ ವಿವರಗಳು ಇಲ್ಲಿದೆ.

ನಮ್ಮ ಮೆಟ್ರೋದಲ್ಲಿ ಸಾಕಷ್ಟು ಜನ ಪ್ರತಿನಿತ್ಯ ಪ್ರಯಾಣ ಮಾಡುತ್ತಾರೆ. ಇದೀಗ ಲಗೇಜ್ ಹೊಂದಿರುವ ಪ್ರಯಾಣಿಕರು ಅದನ್ನು ಎಲ್ಲೋ ಒಂದು ಕಡೆ ಸೇಫ್ ಆಗಿ ಇಟ್ಟು ತಾವು ಹೋಗಬೇಕಾದ ಸ್ಥಳಕ್ಕೆ ಹೋಗಿ ಮತ್ತೆ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸದ್ಯಕ್ಕೆ ಪ್ರಾಯೋಗಿಕವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸೇಫ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಈ ಸೇಫ್ ಲಾಕರ್ ನಲ್ಲಿ ನಿಮ್ಮ ಲಗೇಜ್ ನ್ನು ಸೇಫ್ ಆಗಿ ಇಟ್ಟುಕೊಳ್ಳಬೇಕು. ಮೆಜೆಸ್ಟಿಕ್ ನ ಮೆಟ್ರೋ ನಿಲ್ದಾಣದಲ್ಲಿ ಡಿ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್ ಡಿಜಿಟಲ್ ಲಾಕರ್ ಗೆ ಬಿಎಂಆರ್ ಸಿಎಲ್ ಕಾರ್ಯನಿರ್ವಹಾಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು.

ಈ ಡಿಜಿಟಲ್ ಲಾಕರ್ ನಲ್ಲಿ ಪ್ರಯಾಣಿಕರು 2 ರಿಂದ 5 ಬ್ಯಾಗ್ ಇಡಬಹುದಾಗಿದೆ. ಸ್ಮಾರ್ಟ್ ಡಿಜಿಟಲ್ ಲಾಕರ್ ನಲ್ಲಿನ ಕಿಯೋಸ್ಟ್ ನಲ್ಲಿನ ಹಾಕಿದರೆ ಬ್ಯಾಗ್ ಗಳನ್ನು ಇಡಲು ಲಾಕರ್ ದೊರೆಯುತ್ತದೆ. ನಂತರ ಬ್ಯಾಗ್ ಇಟ್ಟು ಲಾಕ್ ಮಾಡಬೇಕು. ಬಳಿಕ ಬ್ಯಾಗ್ ಮಾಲಿಕರೇ ಬಂದು ಒಟಿಪಿ ಹಾಕುವವರೆಗೂ ಲಾಕರ್ ಓಪನ್ ಆಗಲ್ಲ. ಇದರಿಂದ ನಿಮ್ಮ ಬ್ಯಾಗ್ ನ್ನು ಬೇರೆಯವರು ದುರ್ಬಳಕೆ ಮಾಡಲು ಆಗಲ್ಲ.

ಶುಲ್ಕ ಎಷ್ಟು?
2 ಅಥವಾ ಮೂರು ಬ್ಯಾಗ್ ಗಳನ್ನು 6 ಗಂಟೆಗಳ ಕಾಲ ಇಡಲು 70 ರೂ., 4 ಅಥವಾ 5 ಬ್ಯಾಗ್ ಗಳನ್ನು ಇಡಲು 100 ರೂ. ಶುಲ್ಕ ಪಾವತಿಸಬೇಕು. 12 ಗಂಟೆಗಳ ಕಾಲ ಬ್ಯಾಗ್ ಇಡಲು 120 ರಿಂದ 160 ರೂ. ಶುಲ್ಕ ವಿಧಿಸಬೇಕಾಗುತ್ತದೆ.  ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲೇ ಲಾಕರ್ ವ್ಯವಸ್ಥೆ ಲಭ್ಯವಿರಲಿದೆ. ಸದ್ಯಕ್ಕೆ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ಈ ವ್ಯವಸ್ಥೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಬೇರೆ ನಿಲ್ದಾಣಗಳಿಗೂ ಸೇವೆ ವಿಸ್ತರಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ