Namma Metro: ಮೂರು ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರಿಂದ ಸಂಚಾರ

Sampriya

ಭಾನುವಾರ, 8 ಡಿಸೆಂಬರ್ 2024 (15:25 IST)
ಬೆಂಗಳೂರು: ಡಿಸೆಂಬರ್ 4 ರಿಂದ 6ರ ವರೆಗೆ  ನಮ್ಮ ಮೆಟ್ರೋದಲ್ಲಿ  9,20,562ಲಕ್ಷ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಈ ಹಿಂದೆ ಆಗಸ್ಟ್‌ 14ರಂದು 9.17 ಲಕ್ಷ ಜನರು ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ತೆರಳುವವರು, ಸಾಲು ಸಾಲು ರಜೆ ಇದ್ದಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿತ್ತು.

ಆದರೆ, ಶುಕ್ರವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ದಿನ ಹೊರತುಪಡಿಸಿ ಬೇರೇನು ಮಹತ್ವದ ಕಾರ್ಯಕ್ರಮ ಇಲ್ಲದೇ ಇದ್ದರೂ ಭಾರಿ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದಾರೆ.

ಶುಕ್ರವಾರ ನೇರಳೆ ಮಾರ್ಗದಲ್ಲಿ 4,39,616 ಪ್ರಯಾಣಿಕರು, ಹಸಿರು ಮಾರ್ಗದಲ್ಲಿ 3,12,248 ಜನರು ಪ್ರಯಾಣಿಸಿದ್ದರೆ, 1,67,617 ಪ್ರಯಾಣಿಕರು ಇಂಟರ್‌ಚೇಂಜ್ ಮಾಡಿ ಎರಡೂ ಮಾರ್ಗಗಳಲ್ಲಿ ಸಂಚರಿಸಿದ್ದಾರೆ. 1,091 ಜನರು ಪೇಪರ್ ಟಿಕೆಟ್ ಬಳಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ