ನಂದಿ ಹೀಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ನಿಷೇಧ

ಭಾನುವಾರ, 25 ಜೂನ್ 2017 (13:35 IST)
ಬೆಂಗಳೂರು: ನಂದಿ ಹಿಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ಪ್ರವೇಶ ನಿಷೇಧಿಸಲಾಗಿದೆ. ನಂದಿ ಬೆಟ್ಟದಲ್ಲಿ ಪ್ರತಿ ದಿನ ಮುಂಜಾನೆ 5 ಗಂಟೆಯಿಂದ 9 ಗಂಟೆವರೆಗೆ ನಾಲ್ಕು ಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುತ್ತಿದೆ. ಕಾರಣ ಸೈಕಲ್ ಸವಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಈಕ್ರಮ ಕೈಗೊಳ್ಳಲಾಗಿದೆ.
 
ನಿಂದಿ ಹಿಲ್ಸ್ ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇವರಲ್ಲಿ ಹೆಚ್ಚಿನವರು ಸೈಕಲ್ ನಲ್ಲಿ ಬಂದು ಚಾರಣ ಮಾಡುತ್ತಾರೆ. ಕಾರುಗಳಿಂದಾಗಿ ಇವರಿಗೆ ತೊಂದರೆಯಾಗುತ್ತಿದೆ.  ಅಲ್ಲದೇ ನಂದಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಹಲವು ಸೈಕಲ್ ಸವಾರರು ಅಪಘಾತಕ್ಕೀಡಾಗಿದ್ದರು. ಇನ್ನು ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿದ ಕಾರುಗಳಿಂದಾಗಿ ಅಪಘಾತ ಹೆಚ್ಚಾಗುತ್ತದೆ. ಬೆಟ್ಟ ಹತ್ತುವ ಚಾರಣಿಗರು ಕೂಡಾ ವಾಹನಗಳಿಂದಾಗಿ ಅಪಘಾತಕ್ಕೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ನಿಷೇಧ ಕ್ರಮ ಕೈಗೊಳ್ಳಲಾಗುತ್ತಿದೆ.
 
ಜುಲೈ-1ರಂದು ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಯಲಿದೆ. ಸುಮಾರು 300 ಸೈಕಲ್ ಸವಾರರು ಭಾಗವಹಿಸಲಿದ್ದು, ಈ ಮೂಲಕ ಪ್ರಾಯೋಗಿಕವಾಗಿ ಫೋರ್ ವೀಲರ್ ಗೆ ನೀಷೇಧ ಕ್ರಮ ಜಾರಿಯಾಗಲಿದೆ.
 

ವೆಬ್ದುನಿಯಾವನ್ನು ಓದಿ