ಜಿ20ಯಿಂದ ಹೊಸ ಪಥಕ್ಕೆ ನಾಂದಿ-ಮೋದಿ ವಿಶ್ವಾಸ
ಭಾರತವು ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದ್ದು ನಮಗೆ ಸಂತಸ ತರುತ್ತಿದೆ. ಈಗ ಭಾರತಕ್ಕೆ ಬಂದಿರುವ ಅತಿಥಿಗಳು ನಮ್ಮ ಆತಿಥ್ಯವನ್ನು ಆನಂದಿಸುವ ವಿಶ್ವಾಸವಿದೆಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ. ಜಿ 20 ಶೃಂಗವು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ. ಮಹಾತ್ಮಾ ಗಾಂಧೀಜಿ ಅವರು ಹಿಂದುಳಿದವರಿಗೆ ಸೇವೆ ಸಲ್ಲಿಸುವ ಧ್ಯೇಯ ಪಠಿಸಿದ್ದರು. ಅದನ್ನು ಈಗ ಅನುಕರಿಸುವುದು ಮುಖ್ಯ ಅಂತಾ ಹೇಳಿದ್ದಾರೆ.ಇನ್ನು 21ನೇ ಶತಮಾನದ ವೇಳೆ ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸಲು ಬಯಸುತ್ತೇವೆ. ನಾವು ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳಂತಹ ಭವಿಷ್ಯದ ವಲಯಗಳಿಗೆ ಅಪಾರ ಆದ್ಯತೆಯನ್ನು ನೀಡುತ್ತೇವೆ. ನಾವು ಮತ್ತಷ್ಟು ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ವಿಶ್ವ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ,