ಬೆಂಗಳೂರಿನಲ್ಲಿ ನಂದಿನಿ ಹಾಲಿಗೆ ಶುರುವಾಯ್ತು ಹಾಹಾಕಾರ..!

ಶನಿವಾರ, 11 ಮಾರ್ಚ್ 2023 (17:10 IST)
ನಗರದಲ್ಲಿ ಹಾಲಿಗೆ ಹಾಹಾಕಾರ ಉಂಟಾಗಿದ್ದು,ನಂದಿನಿ ಹಾಲು ಹೊರ ರಾಜ್ಯಗಳಿಗೆ ಹೋಗ್ತಿದೀಯಾ ? ಎಂಬ ಪ್ರಶ್ನೆ ಎದ್ದಿದೆ.ಬೆಂಗಳೂರಿನಲ್ಲಿ ದಿನಕ್ಕೆ 22 ಲಕ್ಷ ಲೀಟರ್ ಹಾಲು ಅಗತ್ಯ.18 ಲಕ್ಷ ಲೀಟರ್  ಹಾಲು ಸರಬರಾಜು ಆಗ್ತಿದ್ದು,ಒಟ್ಟು ನಾಲ್ಕು ಲಕ್ಷ ಹಾಲು ಬೇಡಿಕೆ ಇದೆ .ಈ ಕೊರತೆ ಹೆಚ್ಚು ಬೆಂಗಳೂರಿನಲ್ಲಿ ಮಾತ್ರ ಕನಿಸ್ಕೊಳ್ತಾ ಇದೆ.ನಂದಿನಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
 
ಅಲ್ಲದೇ ಇತ್ತೀಚಿಗೆ ಮದುವೆ  ಸಮಾರಂಭಗಳು ಹೆಚ್ಚಾಗ್ತಿವೆ.ಹೀಗಾಗಿ ನಂದಿನಿ ಹಾಲಿಗೆ ಬೇಡಿಕೆ ಹೆಚ್ಚಾಗಿದೆ .ಆದರೂ ಸಹ ನಂದಿನಿ ಹಾಲು ಪೋರೈಕೆಯಲ್ಲಿ ತೊಂದರೆ ಉಂಟಾಗಿದೆ.ಇನ್ನಾದರೂ ಹೊರರಾಜ್ಯಗಳಿಗೆ ಪೂರೈಸುವ ಹಾಲನ್ನು ಸ್ಥಗಿತ ಗೊಳಿಸಬೇಕು.ಮೊದಲು ಬೆಂಗಳೂರು ನಗರಕ್ಕೆ ಹಾಲನ್ನ ನೀಡಬೇಕು.ಹಾಲಿನ ಪೋರೈಕೆಯ್ಲಲಿ ತೊಂದರೆ ಉಂಟಾದರೆ ಸಾರ್ವಜನಿಕರಿಗೆ, ಹೋಟೆಲ್ ಮಾಲೀಕರಿಗೆ ಬಹು ದೊಡ್ಡ ಹೊಡೆತ ಬೀಳುತ್ತೆ.ಹೊರರಾಜ್ಯ ಗಳಿಗೆ ಪೋರೈಸುವ  ಹಾಲು ಕಡಿಮೆಮಾಡಬೇಕೆಂದು ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿ ಸಿ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ