ಪ್ರಕೃತಿ ವಿಕೋಪ : ಮೋದಿ ಜೊತೆಗೆ ಏನೇನಿದೆ ಗೊತ್ತಾ?

ಭಾನುವಾರ, 9 ಆಗಸ್ಟ್ 2020 (18:57 IST)
ರಾಜ್ಯದ ಪ್ರಕೃತಿ ವಿಕೋಪ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಸಂವಾದ ನಡೆಯಲಿದೆ.

ಕೊಡಗು  ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ತಲಕಾವೇರಿ ಬಳಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆರ್.ಅಶೋಕ್ ಮಾತನಾಡಿ, ತಲಕಾವೇರಿ ಭೂ ಕುಸಿತದ ಲ್ಲಿ ಭೂ ಸಮಾಧಿ ಆದ ಅರ್ಚಕ ಕುಟುಂಬದ 4 ಮಂದಿಯ ಮೃತ ದೇಹದ ಪತ್ತೆಗೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಬೇಕು. ನಾಳೆಯೊಳಗೆ ಕಾರ್ಯಾಚರಣೆ ಮುಗಿಯಬೇಕು.  ಆ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಿದರು.

ಕಾರ್ಯಾಚರಣೆಯನ್ನು ಐದು ತಂಡವಾಗಿ ಮೂರು ಪಾಳಿಯಲ್ಲಿ ನಿರ್ವಹಿಸಬೇಕು ಎಂದು ಆರ್.ಅಶೋಕ್ ಅವರು  ಸಲಹೆ ಮಾಡಿದರು.

ಪ್ರಕೃತಿ ವಿಕೋಪ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೋ ಸಂವಾದವಿದ್ದು, ರಾಜ್ಯದ ಪರಿಸ್ಥಿಯ ಬಗ್ಗೆ ಮಾಹಿತಿ ನೀಡಲಾಗುದು. ಹೆಚ್ಚಿನ ಹಣ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ