ಮಹೇಶ್ ಬಾಬು ಹಾಗೂ ಜೂ.ಎನ್ ಟಿಆರ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ
ಶನಿವಾರ, 8 ಆಗಸ್ಟ್ 2020 (11:15 IST)
ಹೈದರಾಬಾದ್ : ಇತ್ತೀಚೆಗಷ್ಟೆ ‘ಉಮಾ ಮಹೇಶ್ವರಿ ಉಗ್ರ ರೂಪಸ್ಯ’ ಚಿತ್ರದ ಡೈಲಾಂಗ್ ಒಂದರಿಂದ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡ ಟಾಲಿವುಡ್ ನ ಖ್ಯಾತ ನಟರಾದ ಮಹೇಶ್ ಬಾಬು ಹಾಗೂ ಜೂ.ಎನ್ ಟಿಆರ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ.
ಅದೇನೆಂದರೆ ಮಹೇಶ್ ಬಾಬು ಹಾಗೂ ಜೂ.ಎನ್ ಟಿಆರ್ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಿಮದ ಕೇಳಿಬಂದಿದೆ. ನಿರ್ಮಾಪಕ ಅಲ್ಲು ಅರವಿಂದ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಈ ಇಬ್ಬರು ನಟರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಿನಿಮಾ ಕ್ಕಾಗಿ ತಯಾರಿ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.