ಎನ್ ಡಿ ಆರ್ ಎಫ್ : 21 ಸೈನಿಕರು ಮಾಡಿದ್ದೇನು?

ಶನಿವಾರ, 13 ಜೂನ್ 2020 (15:24 IST)
ಎನ್ ಡಿ ಆರ್ ಎಫ್ ನ 21 ಯೋಧರು ವಿಜಯವಾಡದಿಂದ ರಾಜ್ಯಕ್ಕೆ ಬಂದಿದ್ದಾರೆ.

ಮುಂಬರುವ ಮಳೆಗಾಲದಲ್ಲಿ ಆಗಬಹುದಾದ ತೊಂದರೆಗಳನ್ನು ಸಮರ್ಥವಾಗಿ ನಿರ್ವಹಿಸಲು ಧಾರವಾಡ  ಜಿಲ್ಲಾಡಳಿತ  ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಅದರ ಭಾಗವಾಗಿ ಜಿಲ್ಲೆಗೆ ಈಗಾಗಲೇ ವಿಜಯವಾಡದಿಂದ 21 ಯೋಧರನ್ನೊಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜಿಲ್ಲೆಗೆ ಆಗಮಿಸಿದೆ.  ಎನ್.ಡಿ.ಆರ್.ಎಫ್. ತಂಡದ ಸದಸ್ಯರು ನಗರದ ಕೆಲಗೇರಿ ಕೆರೆಯಲ್ಲಿ ಜೀವರಕ್ಷಣಾ ಕಾರ್ಯದ ಪ್ರಾತ್ಯಕ್ಷಿಕೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕೆರೆಯಲ್ಲಿ ವಿಹಾರಕ್ಕೆ ಆಗಮಿಸಿದ ಪ್ರವಾಸಿಗರು ಆಕಸ್ಮಿಕವಾಗಿ ಬೋಟಿನಿಂದ ಕೆರೆಯ ಮಧ್ಯದ ನೀರಿನಲ್ಲಿ ಬಿದ್ದು, ಮುಳಗಲು ಆರಂಭಿಸಿದಾಗ ಕೆರೆಯ ಮತ್ತೊಂದು ಮೂಲೆಯಲ್ಲಿದ್ದ ಎನ್.ಡಿ.ಆರ್.ಎಫ್. ಪಡೆಯ ಯೋಧರು ತಕ್ಷಣ ಆಗಮಿಸಿ, ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸುವ ಪ್ರಾತ್ಯಕ್ಷಿಕೆ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ