ಬೆಂಗಳೂರಿಗೆ ಟಫ್ ರೂಲ್ಸ್: ಇಂದು ನಿರ್ಧಾರ

ಸೋಮವಾರ, 19 ಏಪ್ರಿಲ್ 2021 (09:11 IST)
ಬೆಂಗಳೂರು: ಕೊರೋನಾ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ನಿಯಮಾವಳಿ ಜಾರಿಗೊಳಿಸುವ ಕುರಿತಾಗಿ ಇಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

 

ಬೆಂಗಳೂರಿಗೆ ಮಾತ್ರ ಲಾಕ್ ಡೌನ್ ಮಾಡುವುದೋ, ಇಲ್ಲವೇ ಹೊರ ಜಿಲ್ಲೆಗಳಿಂದ ಇಲ್ಲಿಗೆ ಪ್ರವೇಶ ನಿರಾಕರಿಸುವುದು ಇತ್ಯಾದಿ ಯೋಜನೆಗಳು ಸರ್ಕಾರದ ಮುಂದಿದೆ. ಆದರೆ ಲಾಕ್ ಡೌನ್ ಮಾಡುವ ಮನಸ್ಸು ಸರ್ಕಾರಕ್ಕೂ ಇಲ್ಲ.

ಬದಲಾಗಿ ಕಠಿಣ ನಿಯಮಾವಳಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಪಾರ್ಕ್, ಜಿಮ್, ಮಾಲ್ ಗಳಿಗೆ ನಿರ್ಬಂಧ ವಿಧಿಸುವ ಸಾಧ‍್ಯತೆಯಿದೆ. ನೈಟ್ ಕರ್ಫ್ಯೂ ಮುಂದುವರಿಯಬಹುದು. ಅದರ ಹೊರತಾಗಿ ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್, ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ