ಹಾಸನಾಂಬೆ ದರ್ಶನಕ್ಕೆ ವಿಐಪಿಗಳಿಗೆ ಸಿಗುವ ಅರ್ಧದಷ್ಟು ಸಮಯಾವಾದರೂ ಸಾಮಾನ್ಯರಿಗೆ ಕೊಡಿ: ನೆಟ್ಟಿಗರ ಬೇಡಿಕೆ

Krishnaveni K

ಶುಕ್ರವಾರ, 1 ನವೆಂಬರ್ 2024 (09:19 IST)
Photo Credit: X
ಹಾಸನ: ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ದರ್ಶನಕ್ಕಾಗಿ ಸ್ಥಳೀಯಾಡಳಿತ ಸುವ್ಯವಸ್ಥೆ ಮಾಡಲು ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ
 

ನಿನ್ನೆ ಶಾಸಕ ಎಚ್ ಡಿ ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಹಾಸನಾಂಬೆಯ ಮುಂದೆ ನಿಂತು ಸಾವಕಾಶವಾಗಿ ಪೂಜೆ ಮಾಡಿದ್ದರು. ಇದಕ್ಕೆ ಮೊದಲು ಬಂದಿದ್ದ ಎಲ್ಲಾ ವಿಐಪಿಗಳಿಗೂ ದೇವಿಯ ಮುಂದೆ ನಿಂತು ಸಾವಕಾಶವಾಗಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಇದು ಸಾಮಾನ್ಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೆ ಕೆಲವರು ಇಂಥಾ ವಿಐಪಿಗಳಿಗೆ ಗಂಟೆಗಟ್ಟಲೆ ಪೂಜೆ ಮಾಡಲು ಅವಕಾಶ ಕೊಡ್ತೀರಿ. ಆದರೆ ನಿಜವಾಗಿಯೂ ಭಕ್ತಿಯಿಂದ ಬರುವ ಸಾಮಾನ್ಯ ಭಕ್ತರಿಗೆ ಒಂದು ಸೆಕೆಂಡು ನಿಂತು ಪ್ರಾರ್ಥನೆ ಮಾಡಲೂ ಅವಕಾಶ ಕೊಡಲ್ಲ. ವಿಐಪಿಗಳು ಎನಿಸಿಕೊಂಡವರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿ ಕಾರಿದ್ದಾರೆ.

ಇನ್ನು, ಭಕ್ತರಿಗೆ ವಿಶೇಷ ದರ್ಶನಕ್ಕೆ ಪಾಸ್ ಗಳನ್ನು ನೀಡಲಾಗಿದೆ. ಆದರೆ ಅಲ್ಲೂ ಹಲವು ಸೂಕ್ತ ವ್ಯವಸ್ಥೆಯಿಲ್ಲ. ಪಾಸ್ ಪಡೆದವರೂ ಗಂಟೆ ಗಟ್ಟಲೆ ಕ್ಯೂ ನಿಲ್ಲಬೇಕಾಗಿ ಬರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೋಟಿಗಟ್ಟಲೆ ಆದಾಯ ತಂದುಕೊಡುವ ಹಾಸನಾಂಬೆಯ ದರ್ಶನಕ್ಕೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ವಿಪರ್ಯಾಸ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ