ಹಿಜ್ಬುಲ್ಲಾ ಮುಖ್ಯಸ್ಥನನ್ನೇ ಮುಗಿಸಿದ ಇಸ್ರೇಲ್‌: ಮುಂದುವರೆದ ದಾಳಿ

Sampriya

ಶನಿವಾರ, 28 ಸೆಪ್ಟಂಬರ್ 2024 (17:51 IST)
Photo Courtesy X
ಬೈರೂತ್‌: ನಗರದ ದಕ್ಷಿಣ ಉಪನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದು ಹಾಕಲಾಗಿದೆ.

ಈ ಬಗ್ಗೆ ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಷನಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿ ತಿಳಿಸಿದ್ದಾರೆ. ಹಸನ್ ನಸ್ರಲ್ಲಾ ಸಾವಿಗೀಡಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಲೆಬನಾನ್‌ನಲ್ಲಿ ಅಸ್ಥಿರತೆ ಉಂಟು ಮಾಡುತ್ತಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾಗೆ ಇದು ದೊಡ್ಡ ಹೊಡೆತವಾಗುತ್ತದೆ. ಇನ್ನೂ ನಸ್ರಲ್ಲಾ ಕಾಣೆಯಾಗಿದ್ದಾನೆ ಎಂದು ಹಿಜ್ಬುಲ್ಲಾದ ಆಪ್ತ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಮೇಲ್ಡರ್ಜೆಯ ನಾಯಕರು ಸಾವನ್ನಪ್ಪಿದರೆ ಹಿಜ್ಬುಲ್ಲಾ ಘೋಷಣೆಯನ್ನು ಮಾಡುತ್ತದೆ. ಆದರೆ ಇದುವರೆಗೂ ನಸ್ರಲ್ಲಾನ ಹತ್ಯೆ ಕುರಿತು ಪ್ರಕರಣೆಯಲ್ಲಿ ತಿಳಿಸಿಲ್ಲ.

 ಶಿಯಾ ಮುಸ್ಲಿಮರ ಬೆಂಬಲ ಹೊಂದಿರುವ ನಸ್ರಲ್ಲಾ ಸುಮಾರು ಇಸ್ರೇಲಿ ನಾಗರಿಕರು ಹಾಗೂ ಸೈನಿಕರ ಹತ್ಯೆಗೆ ಕಾರಣನಾಗಿದ್ದ. ಈತನ  ನೇತೃತ್ವದಲ್ಲೇ ಉಗ್ರ ಚಟುವಟಿಕೆ ನಡೆಯುತ್ತಿತ್ತು. ಈತ ಲೆಬನಾನ್‌ನಲ್ಲಿ ಯುದ್ಧ ಅಥವಾ ಶಾಂತಿ ಸ್ಥಾಪಿಸಲು ಸ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ