ಹೊಸ ಬಾಂಬ್ ಸಿಡಿಸಿದ ಸಚಿವ ಎಂ.ಬಿ.ಪಾಟೀಲ್

ಸೋಮವಾರ, 6 ನವೆಂಬರ್ 2017 (14:29 IST)
ಕೇಂದ್ರ ಸರಕಾರ ನನ್ನ ಮತ್ತು ನನ್ನ ಪತ್ನಿ ಹಾಗೂ ಪುತ್ರನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ನಮ್ಮ ಕುಟುಂಬದ ಸದಸ್ಯರ ಫೋನ್‌ಗಳಲ್ಲದೇ ನಮ್ಮ ಕುಟುಂಬದ ವಕೀಲರು ಮತ್ತು ಅವರ ಪತ್ನಿಯ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗುತ್ತಿದೆ.
ನನ್ನ 11 ಮಂದಿ ಆಪ್ತರ ಫೋನ್‌ಗಳನ್ನು ಕೂಡಾ ಟ್ಯಾಪ್ ಮಾಡಲಾಗಿದೆ| ಎಂದು ಆರೋಪಿಸಿದ್ದಾರೆ.
 
ಆದರೆ, ಇಂತಹ ಫೋನ್ ಕದ್ದಾಲಿಕೆಗೆ ಜಗ್ಗುವುದಿಲ್ಲ. ಫೋನ್ ಕದ್ದಾಲಿಕೆ ಬಗ್ಗೆ ಶೀಘ್ರದಲ್ಲಿಯೇ ದೂರು ನೀಡುತ್ತೇನೆ. ನೇರವಾಗಿ ಹೋರಾಟ ಮಾಡಲು ಸಾಧ್ಯವಾಗದ ಬಿಜೆಪಿ ಇಂತಹ ಕುಕೃತ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.  
 
ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಐಟಿ ಇಲಾಖೆಯನ್ನು ಮುಂದಿಟ್ಟುಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಸಚಿವ ಶಿವಕುಮಾರ್ ದೊಡ್ಡ ಉದ್ಯಮಿ. ಐಟಿ ಇಲಾಖೆಯ ಪ್ರಕರಣನ್ನು ಎದುರಿಸಲು ಸಮರ್ಥಿರಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ