ಕನ್ನಡಕ್ಕೆ ಹೊಸ ಫಾಂಟ್ ಬಂಡೀಪುರ! ವಿಶೇಷತೆ ಏನು?

ಬುಧವಾರ, 19 ಜನವರಿ 2022 (12:11 IST)
ಚಾಮರಾಜನಗರ : ಕನ್ನಡ ಅಕ್ಷರ ಶೈಲಿಗೆ ಬಂಡೀಪುರ ಹೆಸರಿನ ಹೊಸ ಫಾಂಟ್ ಸೇರ್ಪಡೆಗೊಂಡಿದೆ.

ಟಿ.ನರಸೀಪುರ ಮೂಲದ ಅನಿಮೇಷನ್ ಕೋರ್ಸ್ ಹಾಗು ಗ್ರಾಫಿಕ್ ಡಿಸೈನ್ ಶಿಕ್ಷಕ ಆರ್.ಮಂಜುನಾಥ್ ಬಂಡೀಪುರ ಹೆಸರಿನಲ್ಲಿ ಕನ್ನಡಕ್ಕೆ ಮತ್ತೊಂದು ಹೊಸ ಯುನಿಕೋಡ್ ಫಾಂಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದ್ದಾರೆ. 

ಆನೆಗಳಿಂದ ಪ್ರೇರಣೆ

ಮಂಜುನಾಥ್ ಅವರು ತಮ್ಮ ಅಕ್ಷರ ಟೈಪ್ ಸ್ಟುಡಿಯೋದಿಂದ ಬಂಡೀಪುರ ಹೆಸರಿನಲ್ಲಿ ಹೊಸ ಫಾಂಟ್ ಬಿಡುಗಡೆ ಮಾಡಿದ್ದು, ಬಂಡೀಪುರದ ಆನೆಗಳಿಂದ ಪ್ರೇರಣೆಗೊಂಡು ಫಾಂಟ್ ರಚಿಸಿದ್ದಾರೆ. ಫಾಂಟ್ ಚೂಪಾದ ಅಂಚುನ್ನು ಎಷ್ಟು ಬೇಕಾದರು ಹಿಗ್ಗಿಸಬಹುದು. ದಪ್ಪ ಇರುವ ಈ ಹೊಸ ಯುನಿಕೋಡ್ ಫಾಂಟ್ ಆನೆಯ ದಂತ ಹಾಗು ಆನೆಯ ಸೊಂಡಿಲನ್ನು ಬಿಂಬಿಸುತ್ತಿದೆ.

ಕನ್ನಡ ಯುನಿಕೋಡ್ ನಲ್ಲಿ ಕೆಲವೇ ಕೆಲವು ಅಕ್ಷರ ಶೈಲಿಗಳು ಲಭ್ಯವಿದ್ದು, ಯುನಿಕೋಡ್ ಕನ್ನಡ ಫಾಂಟ್ ಕೊರತೆ ನೀಗಿಸುವ ಯತ್ನವಾಗಿ ಬಂಡೀಪುರ ಫಾಂಟ್ ಬಿಡುಗಡೆ ಮಾಡಲಾಗಿದೆ.

ಕನ್ನಡದ ಜೊತೆಗೆ ಇಂಗ್ಲೀಷ್, ಲ್ಯಾಟಿನ್ ಲಿಪಿಗಳ ಸಹಾಯದಿಂದ ಬಂಡೀಪುರ ಫಾಂಟ್ ರಚನೆ ಮಾಡಲಾಗಿದೆ. ಶೀರ್ಷಿಕೆಗಳಿಗೆ ಬಳಸಲು, ದೊಡ್ಡಗಾತ್ರದಲ್ಲಿ ಬ್ಯಾನರ್ ಗಳಲ್ಲಿ ಬಳಸಲು ಉತ್ತಮ ಫಾಂಟ್ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ