ತಮಿಳುನಾಡಿನ ಹುಲಿ ಸೆರೆ ಕಾರ್ಯಚರಣೆಗೆ ಬಂಡೀಪುರದ ರಾಣಾ ನೆರವು
ಕರ್ನಾಟಕ ತಮಿಳುನಾಡು ಗಡಿ ಭಾಗದ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ. ಇದರಿಂದಾಗಿ ನಾಲ್ಕು ಮಂದಿ ಹುಲಿ ದಾಳಿಗೆ ಬಲಿಯಾಗಿದ್ದಾರೆ. ತಮಿಳುನಾಡಿನ ಅಡಲೂರು ಅರಣ್ಯ ವಲಯದ ಮುದುಮಲೈಗೆ ಬಂಡೀಪುರದ ಪತ್ತೆದಾರಿ ನಿಪುಣ ಎಂದೇ ಖ್ಯಾತಿಗಳಿಸಿರುವ ರಾಣಾ ಶ್ವಾನವೀಗ ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.ಬಂಡೀಪುರ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಗೂಡಲೂರು ಅರಣ್ಯ ವ್ಯಾಪ್ತಿಯಲ್ಲಿ ಜನಜಾನುವಾರು ಮೇಲೆ ದಾಳಿ ನಡೆಸಿ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಸೆರೆ ಕಾರ್ಯಾಚರಣೆಗೆ ಬಂಡೀಪುರ ವನ್ಯಜೀವಿ ವಲಯದ ಪತ್ತೇದಾರಿ ನಿಪುಣ ರಾಣಾ ಹೆಸರಿನ ಜರ್ಮನ್ ಶಪರ್ಡ್ ಶ್ವಾನವೀಗ ತಮಿಳುನಾಡಿಗೆ ತೆರಳಿದೆ. ತಮಿಳುನಾಡಿನ ನೀಲಗಿರಿಯ ದೇವನ್ ಎಸ್ಟೇಟ್ನಲ್ಲಿ ಬೀಡುಬಿಟ್ಟಿದ್ದ ಹುಲಿಯು ಈಗ ಮದುಮಲೈಯತ್ತ ಪಯಣ ಬೆಳೆಸಿದೆ. ಇದಕ್ಕೂ ಮುಂಚೆ ದೇವನ್ ಎಸ್ಟೇಟ್ನಲ್ಲಿ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದಾದ ನಂತರ ಗೋಪಾಲಕ ಬಸವನ್ ಎಂಬಾತನ ಮೇಲೂ ದಾಳಿ ನಡೆಸಿ ಕೊಂದುಹಾಕಿತ್ತು ಹೀಗೆ ಸಾಲು ಸಾಲು ಜಾನುವಾರುಗಳ ಮಾರಣ ಹೋಮ ನಡೆಸುತ್ತಿರುವ ಹುಲಿಯು ನಾಲ್ಕು ಮಂದಿ ಮನುಷ್ಯರನ್ನು ಬಲಿ ಪಡೆದಿರುವ ಹಿನ್ನೆಲೆ ಹುಲಿಯನ್ನು ಸೆರೆಹಿಡಿಯದೆ ಕೊಂದು ಹಾಕಿ ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಹುಲಿಯ ಕ್ರೌರ್ಯ ಮುಂದುವರಿದ ಬೆನ್ನಲ್ಲೇ ಬಂಡೀಪುರ ವನ್ಯಜೀವಿ ವಲಯದ ಪತ್ತೇದಾರಿಕೆಯಲ್ಲಿ ಎಂದೇ ಖ್ಯಾತಿಯಾದ ನಿಪುಣ ರಾಣನ ಮೊರೆಹೋಗಿರುವ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ರಾಣಾ ಶ್ವಾನವನ್ನು ಕಾರ್ಯಚರಣೆಗಿಳಿಸಿದ್ದು ತಮಿಳುನಾಡು ಅರಣ್ಯ ಇಲಾಖೆ ನಾಲ್ಕು ತಂಡಗಳು ಸೆರೆಕಾರ್ಯಚರಣೆಯಲ್ಲಿ ತೊಡಗಿವೆ.