ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿದ್ದು, ಜನವರಿ 1 ರಿಂದ ಪರಿಷ್ಕೃತ ನೂತನ ಮಾರ್ಗಸೂಚಿ ಏರ್ ಪೋರ್ಟ್ನಲ್ಲಿ ಜಾರಿಗೆ ಬರಲಿದೆ. ಕೋವಿಡ್ ಉಲ್ಬಣಗೊಂಡಿರುವ ದೇಶಗಳಾದ ಚೀನಾ, ಸಿಂಗಾಪುರ, ಹಾಂಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ ನಿಂದ ಭಾರತಕ್ಕೆ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ - ಪಿಸಿಆರ್ ಟೆಸ್ಟ್ ಮಾಡಿಸಿರಬೇಕು, ಏರ್ ಸುವಿಧಾ ಆಪ್ ನಲ್ಲಿ ಆರ್ ಟಿ -ಪಿಸಿಆರ್ ಟೆಸ್ಟ್ ನಲ್ಲಿ ಬಂದ ನೆಗೆಟಿವ್ ಕೋವಿಡ್ -19 ವರದಿಯನ್ನ ಆಪ್ ಲೋಡ್ ಮಾಡಬೇಕಿದೆ, 72 ಗಂಟೆಯೊಳಗಿನ ವರದಿಗೆ ಮಾತ್ರ ಮಾನ್ಯತೆ ನೀಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಬಂದ ವಿದೇಶಿ ಪ್ರಯಾಣಿಕರನ್ನ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗುತ್ತದೆ. ವಿದೇಶದಿಂದ ಬಂದ ಶೇಕಡಾ 2 ರಷ್ಟು ಪ್ರಯಾಣಿಕರನ್ನ ರ್ಯಾಂಡಮ್ ಟೆಸ್ಟ್ ಗೆ ಒಳಪಡಿಸಲಾಗುವುದು, ಪ್ರಯಾಣಿಕರ ಗಂಟಲು ದ್ರವ ತೆಗೆದುಕೊಂಡು ಲ್ಯಾಬ್ ವರದಿಗಾಗಿ ಕಳುಹಿಸಲಾಗುವುದು, ರೋಗ ಲಕ್ಷಣ ಇರುವ ಪ್ರಯಾಣಿಕರನ್ನ ತಕ್ಷಣವೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ನಲ್ಲಿ ವಿನಾಯಿತಿ ನೀಡಲಾಗಿದೆ.